ಮಂಗಳೂರು: ಶ್ರೀ ಅನಂತ ಚತುರ್ದಶಿ ( ನೋಪಿ ) ವ್ರತ ಪ್ರಯುಕ್ತ ಕೊಂಚಾಡಿ ಶ್ರೀ ಕಾಶೀ ಮಠದಲ್ಲಿ ಚಾತುರ್ಮಾಸ ವ್ರತ ಆಚರಿಸುತ್ತಿರುವ ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ಸಂಸ್ಥಾನದ ದೇವರ ಸಮ್ಮುಖದಲ್ಲಿ ವಿಶೇಷವಾಗಿ ಅನಂತ ಚತುರ್ದಶಿ ಕಲಶ ಪ್ರತಿಷ್ಠಾಪಿಸಿ ವಿಶೇಷ ಪೂಜೆ ನೆರವೇರಿತು , ಶ್ರೀ ದೇವರಿಗೆ ವಿಶೇಷ ವಾಗಿ ತಯಾರಿಸಲ್ಪಟ್ಟ ನೈವೇದ್ಯ ಸಮರ್ಪಿಸಲಾಯಿತು.