ಮಂಗಳೂರು:- ಮಂಗಳೂರಿನ ವಿದ್ಯುತ್ ಸರಬರಾಜು ಕಂಪೆನಿ (ಮೆಸ್ಕಾಂ)ಇಲಾಖೆಯು ದಿನಾಂಕ 20/09/2020ರಂದು ಪತ್ರಿಕಾ ಪ್ರಕಟನೆಯಲ್ಲಿ ಸೆಪ್ಟೆಂಬರ್ 21ರ ಒಳಗಡೆ ವಿದ್ಯುತ್ ಬಿಲ್ ಬಾಕಿ ಮತ್ತುಕಟ್ಟದಿದ್ದರೆ ಮನೆಯ ವಿದ್ಯುತ್ ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿರುವುದು ನಿಜಕ್ಕೂಅವಮಾನವೀಯ.
ಪ್ರಸ್ತುತ್ತ ಜನಸಾಮಾನ್ಯರು ಕೊರೊನಾ, ಮಳೆ, ಪ್ರವಾಹ ಇನ್ನಿತರ ಸಮಸ್ಯೆಗಳಿಂದ ತಲ್ಲಣಗೊಂಡಿದ್ದಾರೆ ವ್ಯಾಪಾರ, ವಹಿವಾಟು ಸ್ಥಗಿತಗೊಂಡಿದೆ, ಬಡವರು ಕೂಲಿ ಕಾರ್ಮಿಕರುಒಂದು ಹೊತ್ತಿನ ಊಟಕ್ಕೂ ಕಷ್ಟಪಡಬೇಕಾಗಿದೆ. ವಿಶೇಷವಾಗಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾವಿರಾರುಜನರು ನಿರೋದ್ಯೊಗಿಗಳಾಗಿದ್ದಾರೆ ಇದರಿಂದ ಹಲವಾರುಕುಟುಂಬ ಅತಂತ್ರ ಸ್ಥಿತಿಯಲ್ಲಿದೆ.ಕೊರೊನಾ ಮಹಾಮಾರಿಯು ಜಾಗತಿಕ ವಿಕೋಪವಾಗಿದ್ದು (Epidemic Disease Act) ಅದರ ಪ್ರಕಾರ ಸರಕಾರ ಅತ್ಯಂತ ಜವಾಬ್ದಾರಿಯಿಂದ ಮತ್ತು ಸೂಕ್ಷ್ಮವಾಗಿ ನಿರ್ಧಾರ ತೆಗೆದು ಕೊಳ್ಳತಕ್ಕದ್ದು. ಈ ಎಲ್ಲಾ ಹಿನ್ನೆಲೆಯಲ್ಲಿ ಮೆಸ್ಕಾಂ ಇಲಾಖೆಯು ನೀಡಿರುವ ಈ ಪ್ರಕಟನೆ ಅವಮಾನವಿಯಾ ಮತ್ತು (Epidemic Disease Act) ಕಾನೂನಿನ ತತ್ವಗಳಿಗೆ ವಿರೋಧವಾಗಿದೆ.
ಯಾವುದೇ ಸಂಸ್ಥೆಯಾದರು ಹಣ ವಸೂಲಿಗೆ ಕನಿಷ್ಠ ಒಂದು ತಿಂಗಳ ಮೊದಲು ನೋಟಿಸ್ ನೀಡಬೇಕಾಗುತ್ತದೆ ಆದರೆ ಮೆಸ್ಕಾಂ ಒಂದು ದಿನ ಮುಂಚಿತವಾಗಿ ಪತ್ರಿಕ ಪ್ರಕಟನೆ ನೀಡಿ ತನ್ನ ಬೇಜಾವಾಬ್ದಾರಿಯನ್ನು ಪ್ರದರ್ಶಿಸಿವೆ. ಕೊರೋನಾ ಸನ್ನಿವೇಶದಲ್ಲಿ ಮೆಸ್ಕಾಂ ಜನರಪರವಾಗಿ ನಿಲ್ಲಬೇಕಾಗಿದೆ. ಆದರೆ ಮೆಸ್ಕಾಂ ಸಂಪೂರ್ಣ ಜನ ವಿರೋಧಿ ನಿಲುವನ್ನು ತೆಗೆದುಕೊಂಡದ್ದು ಖಂಡನೀಯ. ಪ್ರಸ್ತುತ ನಗರದಲ್ಲಿ ವಿವಿಧ ರೋಗಗಳಿಂದ ಬಳಲುತ್ತಿರುವ ಸದಸ್ಯರಿರುವ ಮನೆಗಳ ವಿದ್ಯುತ್ ಸ್ಥಗಿತಗೊಳಿಸಿದರೆ ಬಾರಿ ಅನಾಹುತ ಜರುಗಲಿದೆ. ಸರಕಾರದ ನಿಯಮಗಳ ಪ್ರಕಾರ ಕೋವಿಡ್ ಪಿಡಿತರು ಸಾವಿರಾರು ಸಂಖ್ಯೆಯಲ್ಲಿ ಮನೆಗಳಲ್ಲೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂತಹ ಮನೆಗಳ ವಿದ್ಯುತ್ ನಿಲುಗಡೆ ಮಾಡುವುದು ಆಸ್ಪತ್ರೆಯ ವಿದ್ಯುತ್ ನಿಲುಗಡೆ ಮಾಡಿದಂತೆ ಮತ್ತು ಇದೊಂದು ಅತ್ಯಂತ ಕ್ರೂರ ನಡವಳಿಕೆಯಾಗುತ್ತದೆ.
ಕೋವಿಡ್ ನಿಂದ ಕ್ವಾರಂಟೈನವರು ಮತ್ತು ಮನೆಗಳಲ್ಲಿ ಚಿಕಿತ್ಸೆ ಪಡೆಯುವವರು ಮನೆಯಿಂದ ಹೊರಗಡೆ ಹೋಗುವಂತಿಲ್ಲ. ಕೆಲವು ಮನೆಗಳಲ್ಲಿ ಎರಡು ಮೂರು ಸದಸ್ಯರು ಇರುವ ಮನೆಗಳಿಗೆ ಕೂಡ ಈ ಸಮಸ್ಯೆ ಇದೆ. ಹೀಗಿರುವಾಗ ಅವರಿಗೆ ಸರಿಯಾದ ದುಡಿಮೆಯಾಗಲಿ ಅಥವಾ ಇನ್ನಿತರ ರೂಪದಲ್ಲಿ ಹಣ ಹೊಂದಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮೆಸ್ಕಾಂ ಅಧಿಕಾರಿಗಳು ಕೇವಲ ಕಾನೂನನ್ನು ಮುಂದಿಟ್ಟು ಮಾತನಾಡದೆ ಆತ್ಮ ಸಾಕ್ಷಿಯಿಂದ ಕೆಲಸ ಮಾಡಬೇಕಾಗಿದೆ.ಆದುದರಿಂದ,
1.ಕನಿಷ್ಠ ಇನ್ನು 2 ತಿಂಗಳಿನವರೆಗೆ ಯಾವುದೇ ಕಾರಣಕ್ಕೂ ಮನೆಗಳ ವಿದ್ಯುತ್ ಸ್ಥಗಿತಗೊಳಿಸಬಾರದು.
2.ಯಾವ ಬಳಕೆದಾರನಿಗೆ ಹಣಕಟ್ಟಲು ಶಕ್ತಿ ಇದೆಯೋ ಇಲ್ಲವೋ ಎಂಬುದನ್ನು ಗಮನಿಸಿ ಅವನ ಶಕ್ತಿಗನುಸಾರವಾಗಿ ಕಟ್ಟಲು ಅಂತಹವರು ಸ್ವಯಂ ಪ್ರೇರಣೆಯಿಂದ ಮೆಸ್ಕಾಂ ಬಿಲ್ ಕಟ್ಟುವಂತೆ ಜನಾಭಿಪ್ರಾಯ ರೂಪಿಸಬೇಕು. ಇದರ ಹೊರತಾಗಿ ಎಕಾಏಕಿ ವಿದ್ಯುತ್ ಸ್ಥಗಿತಗೊಳಿಸಿ ಕೋವಿಡ್ ಮತ್ತು ಇನ್ನಿತರ ರೋಗ ಸಂತ್ರಸ್ಥರ ಅಪಾಯಕ್ಕೆ ಸಿಲುಕಿದರೆ ಅಂತಹ ಕೇಸುಗಳಲ್ಲಿ ಮೆಸ್ಕಾಂ ಕ್ರಿಮಿನಲ್ ಮೊಕದ್ದಮೆ ಎದುರಿಸಬೇಕಾಗುತ್ತದೆ.
3.ನೆಫ್ಟ್/ಆರ್ಟಿಜಿಎಸ್ ಮುಖಾಂತರ ಅಥವಾ ಆನ್ಲೈನ್ ಮುಖಾಂತರ ಬಿಲ್ ಪಾವತಿಸುವ ಗ್ರಾಹಕರಿಗೆ ಈಗಾಗಲೇ ಸಂಪೂರ್ಣ ಬಿಲ್ಲಿನ ಮೊತ್ತವನ್ನು ಕಟ್ಟುವ ಸೌಲಭ್ಯವಿದ್ದು, ಇದನ್ನು ಸಡಿಲಗೊಳಿಸಿ ಅವರಿಗೆ ಶಕ್ತಿಗಾನುಸಾರವಾಗಿ ಹಣ ಪಾವತಿಸಲು ಅವಕಾಶ ನೀಡಬೇಕು.
4.ಸದ್ರಿ ಮೆಸ್ಕಾಂ ನೀಡುವ ಬಿಲ್ಲುಗಳಲ್ಲಿ ಸರಿಯಾದ ವಿವರಗಳು ಇಲ್ಲದೇ ಇರುವುದರಿಂದ ಗ್ರಾಹಕರಿಗೆ ನೀಡುವ ಬಿಲ್ಲಿನಲ್ಲಿ ಸರಿಯಾದ ವಿವರ ನೀಡಬೇಕು.
ಆದುದರಿಂದ ಆಡಳಿತ ಪಕ್ಷದ ಮಾನ್ಯ ಶಾಸಕರು ಸಂಸದರು, ಜಿಲ್ಲಾಉಸ್ತುವಾರಿ ಸಚಿವರು ಮತ್ತು ಕೇಂದ್ರ ಹಾಗು ರಾಜ್ಯ ಸರಕಾರ ಈ ವಿಷಯದಲ್ಲಿ ತಕ್ಷಣಕ್ರಮ ಕೈಗೊಳ್ಳಬೇಕೆಂದು ಮಾಜಿ ಶಾಸಕರಾದ ಜೆ.ಆರ್ ಲೋಬೊ ಅಗ್ರಹಿಸಿದ್ದಾರೆ.