ಮಂಗಳೂರು: ದೇಶದಲ್ಲಿ ಕೊರೊನಾ ವೈರಸ್ ಲಾಕ್ ಡೌನ್ ಬಳಿಕ ಹಂತಹಂತವಾಗಿ ಕೇಂದ್ರ ಸರ್ಕಾರ ಅನ್ ಲಾಕ್ ಮಾಡುತ್ತಿದ್ದು, ಇದೀಗ ಮಂಗಳೂರಿನಿಂದ ನವದೆಹಲಿಗೆ ವಿಮಾನಯಾನ ಆರಂಭವಾಗಿದೆ.
ಇಂದಿನಿಂದ ಮಂಗಳೂರು-ನವದೆಹಲಿ ನೇರ ವಿಮಾನಯಾನ ಸೇವೆ ಆರಂಭವಾಗಲಿದ್ದು, ದೆಹಲಿಯಿಂದ ಬೆಳಗ್ಗೆ 10.10 ಕ್ಕೆ ಟೇಕಾಫ್ ಆಗಲಿರುವ ವಿಮಾನ ಮಧ್ಯಾಹ್ನ 12.35 ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ.
ಮಧ್ಯಾಹ್ನ 1.10 ಕ್ಕೆ ಮಂಗಳೂರಿನಿಂದ ಟೇಕಾಫ್ ಆಗಲಿರುವ ಇದೇ ವಿಮಾನ ಸಂಜೆ 3.55 ಕ್ಕೆ ದೆಹಲಿಯಲ್ಲಿ ಇಳಿಯಲಿದೆ. ಸದ್ಯ ಈ ವಿಮಾನ ಮಂಗಳವಾರ ಮತ್ತು ಭಾನುವಾರ ಮಾತ್ರ ಕಾರ್ಯನಿರ್ವಹಿಸಲಿವೆ ಎನ್ನಲಾಗಿದೆ.