ಮಂಗಳೂರು,(ಡಿಸೆಂಬರ್ 28):- ಕರ್ನಾಟಕ ಸರ್ಕಾರದ ಉದ್ಯಮವಾದ ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತ (ಲಿಡ್ಕರ್)ನಿಂದ ಹೊಸ ವರ್ಷ ಮತ್ತು ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಡಿಸೆಂಬರ್ 28 ರಿಂದ ಜನವರಿ 13 ರವರೆಗೆ ಶೇಕಡಾ 20 ರಷ್ಟು ರಿಯಾಯಿತಿ ದರದ ಮಾರಾಟವನ್ನು ಎಲ್ಲಾ ಚರ್ಮದ ವಸ್ತುಗಳು ಮತ್ತು ಪಾದರಕ್ಷೆಗಳ ಮೇಲೆ ನೀಡಲಾಗಿದೆ ಎಂದು ಮ್ಯಾನೆಜರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
