ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತದ ಅಗತ್ಯಕ್ಕೆ ಸ್ಪಂದಿಸಿ ಕೊರೋನಾ ವೈರಸ್ ಸರ್ವೇ ಕಾರ್ಯಗಳಿಗೆ ಮನೆಮನೆಗೆ ತೆರಳುವ ಆಶಾ ಕಾರ್ಯಕರ್ತೆಯರಿಗಾಗಿ ಒಟ್ಟು 4 ಲಕ್ಷ ರೂ ಮೌಲ್ಯದ 3 ಸಾವಿರ ಫೇಸ್ ಶೀಲ್ಡ್ ಮತ್ತು 60 ಸಾವಿರ ಕೈಗವಸು (ಹ್ಯಾಂಡ್ ಗ್ಲೌಸ್)ಗಳನ್ನು ರೋಟರಿ ಜಿಲ್ಲೆ 3181ರ ವತಿಯಿಂದ ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ರೊ. ಎಂ. ರಂಗನಾಥ್ ಭಟ್ ದ.ಕ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರಿಗೆ ಹಸ್ತಾಂತರಿಸಿದರು. ವಿಧಾನ ಪರಿಷತ್ ಸದಸ್ಯ ರೊ. ಪ್ರತಾಪ್ ಸಿಂಹ ನಾಯಕ್, ರೊ. ಯತೀಶ್ ಬೈಕಂಪಾಡಿ ಮತ್ತು ರೊ. ರಿತೇಶ್ ಬಾಳಿಗಾ ಉಪಸ್ಥಿತರಿದ್ದರು.
