ಮಂಗಳೂರು:- ಕೇಂದ್ರ ಸರಕಾರ ದ ರೈತ ವಿರೋಧಿ ಮಸೂಧೆ ಖಂಡಿಸಿ ಮಂಗಳೂರು ನಂತೂರು ಹೆದ್ದಾರಿಯಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಯಿತು ಈ ಪ್ರತಿಭಟನೆ ಯಲ್ಲಿ ಕಾರ್ಮಿಕ ದಲಿತ ವಿದ್ಯಾರ್ಥಿ, ಇವಜನ, ಮಹಿಳಾ ಸಂಘಟನೆ, ಕಾಂಗ್ರೆಸ್ ಪಕ್ಷ , ಸಿ ಪಿ ಐ , ಜೆ.ಡಿಯಸ್ , ದಕ್ಷಿಣ ಕನ್ನಡದ ಜಿಲ್ಲಾ ಸಮಿತಿ ಭಾಗವಹಿಸಿದರು . ಈ ಸಭೆಯನ್ನು ಉದ್ದೇಶಿಸಿ ಹಲವಾರು ಮುಖಂಡರು ಮಾತನಾಡಿ ಈ ಚಳುವಳಿಯು ಇನ್ನು ಮುಂದುವರಿಸುದಾಗಿ ತಿಳಿಸಿದರು. ಚಳುವಳಿಯು  ಶಾಂತಿಯುತವಾಗಿ ನಡೆಯಲು ಪೊಲೀಸ್ ಪಡೆಯವರು ಸಹಕರಿಸಿ, ಹಾಗು ಸಂಚಾರ ವ್ಯವಸ್ಥೆಯು ಸರಿಯಾಗಿ  ನಡೆಯುವಂತೆ ಕಾರ್ಯಾಚರಿಸಿದರು.