ಮಂಗಳೂರು: ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜನ್ಮ ದಿನಾಚರಣೆಯನ್ನು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಆಚರಿಸಲಾಯಿತು. ಈ ಸಮಾರಂಭದಲ್ಲಿ ಮುಖ್ಯ ಭಾಷಣಗಾರಾಗಿ ವಾಸುದೇವ ಬೆಳ್ಳೆಯವರು ಮಾತನಾಡುತ್ತಾ ನಾರಾಯಣ ಗುರುಗಳು ಅಂದಿನ ಕಾಲದಲ್ಲಿ ಅಸ್ಪಶೃತೆಯನ್ನು ನಿವಾರಿಸಲು ಸಾಕಷ್ಟು ಶ್ರಮಿಸಿದರು. ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಿ ಶಿಕ್ಷಣದ ಮೂಲಕವೇ ಬಡವರನ್ನು ಸಮಾಜದ ಮೇಲ್ಪಂಕ್ತಿಗೆ ಕೊಂಡೊಯ್ಯಬಹುದು ಅದಲ್ಲದೆ ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂದು ಸಂದೇಶವನ್ನು ಜಗತ್ತಿಗೆ ಸಾರಿ ಸಮಾಜಕ ಕಟ್ಟಕಡೆಯ ಜನರ ಶ್ರೇಯೋಭಿವೃದ್ಧಿಗೆ ಬಹಳವಾಗಿ ಶ್ರಮಿಸಿದರು ಎಂದು ಹೇಳಿದರು. ಮಾಜಿ ಶಾಸಕರಾದ ಜೆ.ಆರ್. ಲೋಬೊ ರವರು ನಾರಾಯಣ ಗುರುಗಳ ಸಂದೇಶಗಳು ಇಂದಿಗೂ ಪ್ರಸ್ತುತ. ಅವರು ನುಡಿದ ಸಂದೇಶವನ್ನು ಇಂದಿನ ಜನಾಂಗ ಪಾಲಿಸಿದರೆ ಅದು ಅವರಿಗೆ ನಾವು ಕೊಡುವ ನಿಜವಾದ ಗೌರವ ಎಂದರು. ಈ ಕಾರ್ಯಕ್ರಮದಲ್ಲಿ ಮಾಜಿ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್, ಬಿ. ರಮಾನಾಥ ರೈ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ವಿಧಾನಸಪರಿಷತ್ ಸದಸ್ಯ ಐವನ್ ಡಿ.ಸೋಜ, ಎಐಸಿಸಿ ಕಾರ್ಯದರ್ಶಿ ಸೂಕರಜ್ ಹೆಗ್ಡೆ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ. ಮೋಹನ್, ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲೀಮ್, ಪ್ರಮುಖರಾದ ವಿನಯರಾಜ್, ಪ್ರತಿಭಾ ಕುಳಾಯಿ, ಗಣೇಶ್ ಪೂಜಾರಿ, ಹೊನ್ನಯ್ಯ, ನಮಿತಾ ರಾವ್, ಪ್ರಭಾಕರ್ ಶ್ರೇಯಾನ್, ರಮಾನಂದ ಪೂಜಾರಿ, ಭರತೇಶ್ ಅಮೀನ್, ನಾಗೇಂದ್ರ ಕುಮಾರ್, ಮುಂತಾದವರು ಉಪಸ್ಥಿತರಿದ್ದರು.ಕಾರ್ಯಕ್ರಮದ ಅತಿಥಿಗಳನ್ನು ಸದಾಶಿವ ಅಮೀನ್ ಸ್ವಾಗತಿಸಿ, ದುರ್ಗಾಪ್ರಸಾದ್ ವಂದನಾರ್ಪಣೆ ಮಾಡಿದರು.
