ಬಂಟ್ವಾಳ: ಯಾವುದೆಲ್ಲ ಕುಟುಂಬಗಳು ಸಂಕಷ್ಟದಲ್ಲಿದೆಯೋ ಮತ್ತು ಯಾವ ಜಮಾತ್ ನಲ್ಲಿ ರಂಜಾನ್ ಕಿಟ್ ವಿತರಣೆ ಕಾರ್ಯ ನಡೆದಿಲ್ಲವೋ ಅದನ್ನು ಪರಿಗಣಿಸಿ, ಈಗಾಗಲೇ ಜಿಲ್ಲೆಯ ಹಲವಾರು ತಾಲೂಕುಗಳಲ್ಲಿ ಜಮಾತ್ ನ ಎಲ್ಲಾ ಅರ್ಹ ಕುಟುಂಬಗಳಿಗೆ ರಂಜಾನ್ ಕಿಟ್ ವಿತರಣೆ ನಡೆಸಿದ “ಟೀಮ್ ಬಿ-ಹ್ಯೂಮನ್ ಮತ್ತು ಹಿದಾಯ ಫೌಂಡೇಶನ್,” “ಜಿಲ್ಲಾ NGO ಕಾರ್ಡಿನೇಷನ್ ಕಮಿಟಿ” ಸಹಯೋಗದೊಂದಿಗೆ ಇಂದು ಬಂಟ್ವಾಳ ತಾಲೂಕಿನ ಬೊಳ್ಳಾಯಿ ಜಮಾತಿನ 110 ಕುಟುಂಬಗಳಿಗೆ ರಂಜಾನ್ ಕಿಟ್ ವಿತರಣೆ ಕಾರ್ಯ ನಡೆಸಿತು.
ಬದ್ರಿಯಾ ಜುಮಾ ಮಸ್ಜಿದ್ ಬೊಳ್ಳಾಯಿ ಇದರ ಸಭಾಂಗಣದಲ್ಲಿ ನಡೆದ ಈ ಕಿಟ್ ವಿತರಣಾ ಕಾರ್ಯಕ್ರಮವನ್ನು ಮಸೀದಿ ಖತೀಬರಾದ ಅಬ್ಬಾಸ್ ಸಹದಿರವರು ದುಆ ನೆರವೇರಿಸಿ ಚಾಲನೆ ನೀಡಿದರು. *ಸಂಘಟನೆಯ ಕಾರ್ಯ ಪ್ರವೃತ್ತಿಯನ್ನು ವಿವರಿಸುತ್ತಾ ಮಾತನಾಡಿದ ಬಿ-ಹ್ಯೂಮನ್ ಗೌರವಾನ್ವಿತ ಸದಸ್ಯರಾದ ಯು.ಬಿ ಸಲೀಂ ಮಾತನಾಡಿ, ಬಿ-ಹ್ಯೂಮನ್ ಎಂದರೆ ಮಾನವನಾಗಿರಿ ಎಂಬ ಅರ್ಥವಾಗಿದೆ. ಒಬ್ಬ ಮನುಷ್ಯನು, ಸಂಕಷ್ಟದಲ್ಲಿರುವ ಇನ್ನೊಬ್ಬನಿಗೆ ಸ್ಪಂದಿಸಿದರೆ ಅಥವಾ ನೆರವಾದರೆ ಮಾತ್ರ ಒಬ್ಬ ಮಾನವನಾಗಿರಲು ಸಾಧ್ಯ. ಬಿ-ಹ್ಯೂಮನ್ ಸಂಘಟನೆಯು ಹಲವಾರು ಕುಟುಂಬಗಳಿಗೆ ನೇರವಾಗಿ ಇದೆ ದಾರಿಯನ್ನು ಅನುಸರಿಸುತ್ತಾ ಬಂದಿದೆ. ಆರ್ಥಿಕ ಸಂಕಷ್ಟದ ಕುಟುಂಬಗಳಿಗೆ ಆರ್ಥಿಕ ನೆರವು, ಶಿಕ್ಷಣಕ್ಕೆ ನೆರವು, ಬಡವರ ವಸತಿ ಸೌಕರ್ಯಕ್ಕೆ ನೆರವು, ಹಲವು ರೋಗಿಗಳಿಗೆ, ಅನಾರೋಗ್ಯ ಪೀಡಿತರಿಗೆ ಆಸ್ಪತ್ರೆಗಳಲ್ಲಿ ಭೇಟಿ ನೀಡಿ ನೆರವುಗಳನ್ನು ನೀಡುತ್ತಾ , ಆಸೀಫ್ ಡೀಲ್ಸ್ ನೇತೃತ್ವದ ಟೀಮ್ ಬಿ-ಹ್ಯೂಮನ್ ಹಲವಾರು ಕಾರ್ಯಗಳನ್ನು ಮಾಡುತ್ತಾ ಬಂದಿದೆ. *
ಹಲವು ವಿದೇಶಿ ಉದ್ಯಮಿಗಳು, ನಾಡಿನ ಉದ್ಯಮಿಗಳು ಮತ್ತು ಸ್ನೇಹಿತರು ಕಾಣದ ಕೈಗಳ ರೂಪದಲ್ಲಿ ಎಲ್ಲಾ ಕಾರ್ಯ ಯೋಜನೆಗೂ ಅಪಾರ ಧನ ಸಹಾಯದ ಮೂಲಕ ನೆರವಾಗುತ್ತಿದ್ದಾರೆ. ಅಲ್ಲಾಹನ ಅಪಾರ ಅನುಗ್ರಹದಿಂದ ಸಂಸ್ಥೆಗೆ ಇದೇ ದೊಡ್ಡ ಶಕ್ತಿಯಾಗಿದೆ ಎಂದು ಸಂಸ್ಥೆಯ ಬಗ್ಗೆ ವಿವರಿಸುತ್ತಾ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಟೀಮ್ ಬಿ-ಹ್ಯೂಮನ್ ಸ್ಥಾಪಕಾಧ್ಯಕ್ಷ ಆಸೀಫ್ ಡೀಲ್ಸ್, ಬೊಳ್ಳಾಯಿ ಜುಮಾ ಮಸ್ಜಿದ್ ಅಧ್ಯಕ್ಷ ಬಿ.ಎಸ್ ಮಹಮ್ಮದ್, ಶಕೂರ್ ಹಾಜಿ ಹಿದಾಯ, ಟೀಮ್ ಬಿ-ಹ್ಯೂಮನ್ ಗೌರವಾನ್ವಿತ ಸದಸ್ಯರಾದ ಅಶ್ರಫ್ ಐನಾ, ಅಲ್ತಾಫ್, ಇಮ್ತಿಯಾಜ್ ಪಾರ್ಲೆ, ಶಿಯಾ ಡೀಲ್ಸ್, ಅಹ್ನಫ್ ಡೀಲ್ಸ್, ಬೊಳ್ಳಾಯಿಯ ಹನೀಫ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಪಿ.ಜೆ ಅಬ್ದುಲ್ ಸಲೀಂ ಸ್ವಾಗತಿಸಿ, ಮುಸ್ತಫಾ ಬೊಳ್ಳಾಯಿ ವಂದಿಸಿದರು.