ಮಂಗಳೂರು:- ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೇಸ್ ಸಮಿತಿಯ ವತಿಯಿಂದ ಈ ಕೋವಿಡ್‍ನಂತಹ ಪರಿಸ್ಥಿತಿಯಲ್ಲಿ ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಹೆಲ್ಪ್ ಲೈನ್ ವಾರಿಯರ್ಸಗಳನ್ನು ನೇಮಿಸಲಾಗಿದೆ. ಈ ಕೋವಿಡ್ ಹೆಲ್ಪ್ ಲೈನ್ ವಾರಿಯರ್ಸ್‍ಗಳಿಗೆ ಬ್ಯಾಜ್‍ಗಳನ್ನು ನೀಡಲಾಗಿದೆ. ಅದೇ ರೀತಿಯಲ್ಲಿ ಕೋವಿಡ್ ಹೆಲ್ಪ್ ಲೈನ್ ವಾರಿಯರ್ಸ್‍ಗಳಿಗೆ ಜನರ ಸೇವಗಾಗಿ ಜೀಪ್‍ಗಳನ್ನು ನೀಡಲಾಗಿದೆ. ಹಾಗೆಯೇ ಹೆಲ್ಪ್ ಲೈನ್‍ಗೆ 50 ಜನರ ಸಮಿತಿಯನ್ನು ಮಾಡಲಾಗಿದೆ. ಜನರಲ್ಲಿ ಈ ಕೋವಿಡ್‍ನ ಬಗ್ಗೆ ಅರಿವು ಮೂಡಿಸುವುದು ಈ ಸಮಿತಿಯ ಮುಖ್ಯ ಉದ್ದೇಶ.
ಅಂತೆಯೇ ಈಗಾಗಲೆ ಜನರಲ್ಲಿ ಮಾಸ್ಕ್, ಸಾನಿಟಾಯಿಸರ್ ಗಳನ್ನು ನಿಡುವುದರಿಂದ ಜನರಲ್ಲಿ ಒಂದು ರೀತಿಯ ಅರಿವನ್ನು ಮೂಡಿಸಲಾಗಿದೆ. ಅಷ್ಟೇ ಅಲ್ಲದೆ ಕಚೇರಿಯಲ್ಲಿ ಸಹಾಯವಾಣಿಯ ವ್ಯವಸ್ಥೆಯನ್ನು ಮಾಡಲಾಗಿದೆ. ಹಾಗೆಯೇ ಅಂತ್ಯಕ್ರಿಯೆಗೂ ಕೂಡ ಸಮಿತಿಯನ್ನು ಮಾಡಬೇಕು ಎಂಬ ಯೋಚನೆ ಇದೆ ಎಂದು ಶಾಸಕ ಐವನ್ ಡಿಸೋಜರವರು ತಿಳಿಸಿದರು.