ಉಡುಪಿ,(ಡಿಸೆಂಬರ್ 5): ಭಾರೀ ಸರಕು ವಾಹನ, ಮಜಲು ವಾಹನ ಹಾಗೂ ಇನ್ನಿತರ ವಾಹನ ಮಾಲೀಕರು ತೆರಿಗೆ, ವಿಮಾ ಪತ್ರ, ಅರ್ಹತಾ ಪತ್ರ, ವಾಯು ಮಾಲಿನ್ಯ ಪ್ರಮಾಣ ಪತ್ರಗಳನ್ನು ಆಗಿಂದಾಗ್ಗೆ ನವೀಕರಿಸುತ್ತಾ ಎಲ್ಲಾ ಮೂಲ ದಾಖಲೆಗಳ ಪ್ರತಿಗಳನ್ನು ವಾಹನದಲ್ಲಿ ಇರಿಸಿಕೊಂಡು ವಿಶೇಷ ತಪಾಸಣಾ ಕಾರ್ಯಾಚರಣೆ ಸಮಯದಲ್ಲಿ ಹಾಜರುಪಡಿಸಿ, ಅನಾವಶ್ಯಕ ಮುಟ್ಟುಗೋಲು ಹಾಗೂ ದಂಡದಿoದ ತಪ್ಪಿಸಿಕೊಳ್ಳುವಂತೆ ಪ್ರಭಾರ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.