ಅದೊಂದು ಊಹಿಸಲಾಗದ ದಿನ

ಸಾವಿರಕ್ಕೂ ಹೆಚ್ಚು ಜನರ ನಿಧನ

ದುಡ್ಡು ಕೊಟ್ಟು ಸಾಯುವುದು ಅಂದರೆ ಇದೇನಾ?

ಇದನ್ನು ಎನಿಸಿದರೆ ಜುಂ ಅನ್ನುತ್ತೆ ತನು ಮನ

ಇನ್ನೂರು ಮೀಟರ್ ಉದ್ದದ ನೌಕಾ ಯಾನ

ಮುಳುಗಿ ಹೋಯಿತಲ್ಲವೆ ನಿಧಾನ

ಟೈಟಾನಿಕ್ ಅನ್ನು ಮುಳುಗಲಾಗದ ಹಡಗು ಎಂದು ಹೇಳಿದ್ದು ಸುಮ್ಮನೆನಾ

ಅಷ್ಟೂ ಜನರ ಸುಂದರ ಕನಸುಗಳು ನುಚ್ಚು ನೂರಾಯಿತ್ತಲ್ಲವೆ ಆ ಕರಾಳ ದಿನ

ಮೂರು ‌ಸಾವಿರದ ಮುನ್ನೂರು ಜನರ ಪ್ರಯಾಣ

ಸಂಬಂಧವಿಲ್ಲದ ಜನರ ಅಲ್ಲಿ ಮಿಲನ

ಅಷ್ಟು ಶ್ರೀಮಂತರಾದರೂ ಅವರಿಗೆ ಬರಲಿಲ್ಲ ಸಹಾಯಕ್ಕೆ ಧನ

ಹಿಮಗಡ್ಡೆಗೆ ಬಡಿದಾಗ ಅವರ ನೌಕಾ ‌ಯಾನ

ಅವರೆಲ್ಲರಿಗೂ‌ ಬಂದಿತು ಒಂದು ಅನುಮಾನ

ಅದೇ ಅವರು ಬದುಕುಳಿಯುತ್ತಾರೋ ಮರುದಿನ

ಕೊನೆಗೆ ಸತ್ಯವಾಗಿ ಬಿಟ್ಟಿತು ಅವರ ಅನುಮಾನ

ಅವರಿಗಾಗಿ ಇರುವ ನಾವು ಒಂದು ಕ್ಷಣ ಮೌನ

ಹಾಗಾದರೂ ಮಾಡುವ ಅವರಿಗೊಂದು ನಮನ

ಆದರೆ ಒಂದಂತ್ತು ಸತ್ಯ ವಚನ

ಸಾವೇ ಅಲ್ಲ ಎಲ್ಲದಕ್ಕೂ ಕೊನೆಯ ಕ್ಷಣ

ಎಕೆಂದರೆ, ಸಾವಿನಿಂದ ಹುಟ್ಟುವುದು ಮರು ಜನ್ಮ.


                         - ವಿಜಯಲಕ್ಷ್ಮಿ. ಆರ್. ಕಾಮತ್

                                         ಮುನಿಯಾಲು