ಭೂಮಾತೆ ಹಿಂದೆಂದೂ ಕಾಣದಂತಹ

ಮನುಕುಲದ ಮಹಾಮಾರಿ ಕೊರೋನಾ...

ಇದು ನಮಗೆ ನಾವೇ

ಬರೆದುಕೊಂಡ ಮರಣ ಶಾಸನ...


ಅಭಿವೃದ್ಧಿಯ ಅಂಗವಾಗಿ

ಜೀವ ತಳೆದಿದೆ ಕೊರೋನಾ...

ಇದು ಪ್ರಕೃತಿ ನಾಶಕ್ಕೆ

ಮಾನವನ ಮೇಲೆ ಪ್ರತೀಕಾರಾನಾ...


ಅರೆರೆ ದೊಡ್ಡಣ್ಣನ ಬಂಧಿಸಿ

ಚಕ್ರವ್ಯೂಹ ರಚಿಸಿದೆ ಕೊರೋನಾ...

ಇದ ಭೇದಿಸಲು ಆಗಬೇಕಾ

ಅಭಿಮನ್ಯುವಿನ ಆಗಮನ...


ಕುರುಡು ಕಾಂಚನಾಳ ಕಾಲನ್ನೇ

ಮುರಿದು ಮೂಲೆಮಾಡಿದೆ ಕೊರೋನಾ...

ಮೂಡಿಸುತ್ತಿದೆ ಮಾನವಂಗೆ

ಮಾನವೀಯತೆಯ ಸಾಕ್ಷಾತ್ಕಾರಾನಾ...


ಆಸೆ ಎಂಬ ಹುಚ್ಚುಕುದುರೆ

ಕರೆತಂದ ಮಾರಿ ಕೊರೋನಾ...

ಬಹುಶಃ ಇದು ಪ್ರಕೃತಿ

ತಂತಾನೇ ಮಾಡಿಕೊಳ್ಳುತಿರುವ ಋಣಸಂದಾನ…

                    -ಮಾಗಿದ ಮನಸ್ಸು