ಅಂಗೈ ಆಕಾಶ ನೋಡಿದಾಗಿನಿಂದ

ಶುರು ನಿನ್ನ ಜೀವನ

ಅದೇ ಅಂಗೈ ಅವನಿಯ

ನೋಡಲು ನೀನು ಪಾವನ


ಈ ಎರಡಂತಗಳ ನಡುವೆ

ಗುರಿಯೆಡೆಗೆ ಸಾಗಲಿ ಪಯಣ

ಅಮೃತದಂತೆ ಈ ಸಮಯ

ವಿಷವಾಗುವುದು ಮಾಡಿದರೆ ಕಾಲಹರಣ


ಕಾಲವು ಕಾರ್ಕೋಟಕವಾದೊಡೆ

ತಿಳಿ ನಿನ್ನ ಬಾಳು ಬಲುದಾರುಣ

ಸಾಧನೆಯಿಲ್ಲದೆ ಸತ್ತರೆ ಹೇಳುವರು

ನಿನ್ನದು ತೃಪ್ತಿಹೀನ ಮರಣ


By ಮಾಗಿದ ಮನಸ್ಸು