ಉಡುಪಿ (ಸೆಪ್ಟೆಂಬರ್, 18): ಪ್ರಸ್ತುತ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಜಿಲ್ಲೆಯ, ಉಡುಪಿ ತಾಲೂಕಿನಲ್ಲಿ ಕೃಷಿ ಬೆಳೆಕಟಾವು ಪ್ರಯೋಗಗಳನ್ನು ನಡೆಸಲು ವಿಮಾ ಘಟಕಗಳಿಗೆ ಒದಗಿಸಲು ರೀ ಚಾರ್ಜೇಬಲ್ ಬ್ಯಾಟರಿ ಚಾಲಿತ ತೂಕದ ಯಂತ್ರಗಳನ್ನು ಸರಬರಾಜು ಮಾಡಲು ಟೆಂಡರ್ ಆಹ್ವಾನಿಸಲಾಗಿದೆ.

     ಇಚ್ಛೆಯುಳ್ಳ ಸಂಸ್ಥೆಯವರು 100 ರೂ. ಪಾವತಿಸಿ ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಉಡುಪಿ ಇಲ್ಲಿಂದ ಅರ್ಜಿಯನ್ನು ಪಡೆಯಬಹುದಾಗಿದೆ. ಭರ್ತಿ ಮಾಡಿದ ಟೆಂಡರ್ ಅರ್ಜಿಗಳನ್ನು ಸೆಪ್ಟೆಂಬರ್ 25 ರ ಸಂಜೆ 4.00 ಗಂಟೆಯ ಒಳಗೆ ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಉಡುಪಿ ಕಛೇರಿಯಲ್ಲಿರುವ ಟೆಂಡರ್ ಪೆಟ್ಟಿಗೆಯಲ್ಲಿ ಸಲ್ಲಿಸಬಹುದಾಗಿದೆ. ಟೆಂಡರ್‌ನ್ನು ಸೆಪ್ಟಂಬರ್ 28 ರ ಸಂಜೆ 4 ಗಂಟೆಗೆ ತೆರೆಯಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.