ಉಡುಪಿ: ಜಿಲ್ಲೆಯಲ್ಲಿ ಶನಿವಾರ ನಡೆದ ದ್ವಿತೀಯ ಪಿಯುಸಿ ರಾಜ್ಯಶಾಸ್ತ್ರ(ಪೊಲಿಟಿಕಲ್ ಸೈನ್ಸ್) ಮತ್ತು ಸಂಖ್ಯಾಶಾಸ್ತ್ರ(ಸ್ಟ್ಯಾಟಿಸ್ಟಿಕ್ಸ್) ಪರೀಕ್ಷೆಯಲ್ಲಿ ಒಟ್ಟು 4832 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ರಾಜ್ಯಶಾಸ್ತ್ರ ಪರೀಕ್ಷೆಗೆ ನೊಂದಾಯಿಸಿದ್ದ 1744 ಮಂದಿ ವಿದ್ಯಾರ್ಥಿಗಳಲ್ಲಿ 55 ಮಂದಿ ಗೈರು ಹಾಜರಾಗಿದ್ದು, 1689 ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ. ಸಂಖ್ಯಾಶಾಸ್ತ್ರ ಪರೀಕ್ಷೆಗೆ 3153 ಮಂದಿ ವಿದ್ಯಾರ್ಥಿಗಳು ಹೆಸರು ನೊಂದಾಯಿಸಿದ್ದು, 10 ಮಂದಿ ಗೈರು ಹಾಜರಾಗಿ 3143 ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಪಿಯು ಇಲಾಖೆಯ ಉಪ ನಿರ್ದೇಶಕ ಭಗವಂತ ಕಟ್ಟಿಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.