ಬದುಕು ಬವಣೆ ಎಂಬುದು

ಎದೆ ತುಂಬಿದ ಭಾವ ಲಹರಿ

ಸುಖ-ದುಃಖಗಳ ಸಮರದಿ

ಕಂಡಲ್ಲಿ ಹರಿವ ಸಣ್ಣ ಝರಿ


ದ್ವಂದ್ವ ಮನದೊಳು ನೀನಾಡುವೆ

ಕೂಡಿಟ್ಟ ಕನಸುಗಳ ಲಗೋರಿ

ಸದಾ ನಗುತಿರು, ಸಮಸ್ಯೆಯ

ಪರಿಹಾರ ಬರುವುದು ಮಂಡಿಯೂರಿ


ಬೇಕು-ಬೇಡಗಳ ಅಳತೆಗಣ್ಣಿನಿಂ

ನೋಡುತಲೇ ನೀನಾದೆ ವಿಹಾರಿ

ಅರಿಯದ ಗುರಿಯನೊತ್ತು

ಅರಿವಿಗಾಗಿ ಅಲೆವ ಸಂಚಾರಿ


-By ಮಾಗಿದ ಮನಸ್ಸು