ಅವಳಂದಕ್ಕೆ ಮಾರುಹೋದ ಸಾಮ್ರಾಟ..
ಜಗದದ್ಭುತ ಪ್ರೇಮ ನಿವೇದಕ....
ಬಿಳಿಹಾಳೆ ಬಳಸಿಲ್ಲವೋ...
ಬರವಣಿಗೆ ಇಳಿಸಿಲ್ಲವೋ...
ಪ್ರೇಮಪತ್ರ ಬರೆಯಲಿಲ್ಲವೋ...
ಪ್ರತ್ಯುತ್ತರಕೆ ಕಾಯಲಿಲ್ಲವೋ....
ಮುಂಜಾವು ತಿಳಿಗುಲಾಬಿ ಬಣ್ಣ..
ಇಳಿ ಸಂಜೆ ಹಾಲ್ಬಿಳಿ ಬಣ್ಣ....
ಹುಣ್ಣಿಮೆಯಲಿ ಹೊಂಬಣ್ಣ...
ಬಳೆಯಲಿಲ್ಲ ನವವಿದದ ವರ್ಣ....
ಯಮುನಾ ನದಿತೀರ ಸಾಕ್ಷಿಪ್ರೇಮಕೇ...
ಮುತ್ತಿನಂದದ ಸ್ಮಾರಕಕ್ಕೆ...
ಸರಿಸಾಟಿಯಾವುದಿಲ್ಲವಿ ಚಂದಕ್ಕೆ...
ಕಲ್ಲಲ್ಲಿ ಭಾವನೆಗಳ ಬಿಂಬಕೆ...
ಮನದರಸಿ ಮುಮ್ತಾಜ್ ನೆನಪಿಗೆ...
ತಾಜ್ ಮಹಲಾಯ್ತು ಪ್ರೇಮದ ಕಾಣಿಕೆ...
ಇತಿಹಾಸದ ಪುಟದಲ್ಲಿ ಪ್ರಕಟಿತ....
ಅಚ್ಚಳಿಯದಿ ಪ್ರೇಮ ಶಾಶ್ವತ...
-By ಪ್ರೀತಿ. ಮಾಂತಗೌಡ.ಬನ್ನೇಟ್ಟಿ.
ವಿಜಯಪುರ ಜಿಲ್ಲೆ.