ಮಹಿಳಾ ಮೀಸಲಾತಿ ಮಸೂದೆಯು ಲೋಕಸಭೆಯಲ್ಲಿ ಸಂಪೂರ್ಣ ಬೆಂಬಲ ಪಡೆದು ಪಾಸಾಯಿತು. ಸೆಪ್ಟೆಂಬರ್ 21ರಂದು ಈ ಮಸೂದೆಯು ರಾಜ್ಯಸಭೆಯಲ್ಲಿ ಮಂಡನೆ ಆಗಲಿದೆ.
ಮಹಿಳಾ ಮಸೂದೆ ಪರ 454 ಲೋಕಸಭೆ ಸದಸ್ಯರು ಮತ ಚಲಾಯಿಸಿದರು. ಎಐಎಂಐಎಂ ಪಕ್ಷದ ಇಬ್ಬರು ಸದಸ್ಯರು ಈ ರೀತಿಯಲ್ಲಿ ಈ ಮಸೂದೆ ಒಪ್ಪಲಾಗದು ಎಂದರು.
ಎಂಟು ಗಂಟೆಗಳ ಕಾಲ ನಡೆದ ಐತಿಹಾಸಿಕ ಚರ್ಚೆಯಲ್ಲಿ 60 ಸಂಸದರು ಈ ಬಗೆಗೆ ತಮ್ಮ ಮಾತನ್ನು ಸೇರಿಸಿದರು.