ಮಂಗಳೂರು:- ವಿಶ್ವ ಹಿಂದು ಪರಿಷತ್ ಮತ್ತು ಶ್ರೀ ರಾಮೋತ್ಸವ ಸಮಿತಿ 20 ನೇ ವರ್ಷದ ಶ್ರೀ ರಾಮೋತ್ಸವ ಕಾರ್ಯಕ್ರಮವು "ವಿಶ್ವಶ್ರೀ" ಕಾರ್ಯಾಲಯ ಕದ್ರಿಯಲ್ಲಿ 21 ಏಪ್ರಿಲ್ ಬುಧವಾರ  ಶ್ರೀರಾಮ, ಸೀತಾಮಾತೆ, ಲಕ್ಷ್ಮಣ ಮತ್ತು ಹನುಮಂತ ದೇವರ ನೂತನ ರಜತ ವಿಗ್ರಹ ಪ್ರತಿಷ್ಠೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. , ಬೆಳ್ಳಿಗ್ಗೆ 11 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. 


ಶ್ರೀಧಾಮ ಮಾಣಿಲ ಮಠದ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಕಾರ್ಯಾಧ್ಯಕ್ಷರಾದ ಪ್ರೊ.ಎಂ.ಬಿ ಪುರಾಣಿಕ್, ದಿನೇಶ್ ಕುಮಾರ್ ಮ್ಹಾಲಕರು ದಿನೇಶ್ ಟಿಂಬರ್ಸ್, ಸಮೀರ ಪುರಾಣಿಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಾರದಾ ಎಜುಕೇಶನ್ ಟ್ರಸ್ಟ್, ಮನೋಹರ್ ಶೆಟ್ಟಿ ಮನಪಾ ಸದಸ್ಯರು,ಗೋಪಾಲ್ ಕುತ್ತಾರ್ ಜಿಲ್ಲಾಧ್ಯಕ್ಷರು ವಿಹಿಂಪ, ಜಗದೀಶ್ ಶೇಣವ ರಾಮೋತ್ಸವ ಸಮಿತಿ ಅಧ್ಯಕ್ಷರು ಈ ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದರು, ರಾಮನವಮಿ ಪ್ರಯುಕ್ತ ದೇವರಿಗೆ ವಿಶೇಷ ಪೂಜೆ ನಡೆಯಿತು.