ಮಂಗಳೂರು, ಸೆ. 01: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಮಂಗಳೂರು ನಗರ ದಕ್ಷಿಣ ಸ್ಥಳಿಯ ಸಂಸ್ಥೆಯು ನಡೆಸುವ ದೇಶಭಕ್ತಿ ಮತ್ತು ಜನಪದ ಗೀತೆ ಗಾಯನ ಸ್ಪರ್ಧೆ ಇಂದು ಲಾಲ್ ಬಾಗ್ ನ ಸ್ಕೌಟ್ ಭವನದ ಸಭಾಂಗಣದಲ್ಲಿ ನಡೆಯಿತು.

ಈ  ಕಾರ್ಯಕ್ರಮಕ್ಕೆ ಸ್ಥಳೀಯ ಸಂಸ್ಥೆಯ  ವಸಂತ ಕುಮಾರ್ ಕೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾದ , ಪ್ರಶಾಂತ್ ಕುಮಾರ್ ಶೇಟ್ ರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ಮುಖ್ಯ ಅತಿಥಿಗಳಾಗಿ ಉಪಾಧ್ಯಕ್ಷ   ಶ್ರೀನಿವಾಸ ಪೂಜಾರಿ, ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರಾದ  ನಾರಾಯಣ ಶೇರಿಗಾರ್, ADC ಲಯನ್ ಆಶಾ ಶೆಟ್ಟಿ, ಲಯನ್ಸ್ ಕ್ಲಬ್ ಮಂಗಳೂರು ಬಿಜೈ ಇದರ ಅಧ್ಯಕ್ಷರಾದ ಲ| ಅಶೋಕ್ ಪಿಂಟೊ, ಲ| ಡ್ಯಾನಿ ಪೌಲ್, ಜಿಲ್ಲಾ ಕಾರ್ಯದರ್ಶಿ ಪ್ರತಿಮ್ ಕುಮಾರ್ ಕೆ. ಸ್., ರಾಜ್ಯ ಸಹಾಯಕ ಸಂಘಟನಾ ಆಯುಕ್ತರು ಭರತ್ ರಾಜ್ ಕೆ, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಪ್ರೀತಿ ಲೋಬೋ, ಕೋಶಾಧಿಕಾರಿ ಸಂಧ್ಯಾ, ತೀರ್ಪುಗಾರರಾದ ಶಾಂತ ಆಚಾರ್ಯ, ರಶ್ಮಿ ಹರಿಹರನ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ಉದ್ಘಾಟಿಸಿದ ಪ್ರಶಾಂತ್ ಕುಮಾರ್ ಶೇಟ್ ರವರು ವಿದ್ಯಾರ್ಥಿಗಳು ಸ್ಕೌಟ್ಸ್ ಗೈಡ್ ಮುಖಾಂತರ ಶಿಸ್ತಿನ ಮಹತ್ವವನ್ನು ತಿಳಿಯುತ್ತಾರೆ ಎಂದರು. 

ಬಳಿಕ ಮಾತನಾಡಿದ ಲಯನ್ಸ್ ಕ್ಲಬ್ ಮಂಗಳೂರು ಬಿಜೈ ಇದರ ಅಧ್ಯಕ್ಷ ಲ| ಅಶೋಕ್ ಪಿಂಟೊ ರವರು ಸ್ಪರ್ಧಿಗಳಿಗೆ ದೇಶಭಕ್ತಿ ಗೀತೆ ಹಾಗೂ ಜನಪದ ಗೀತೆಯ ಮಹತ್ವವನ್ನು ತಿಳಿಸಿ ಶುಭಕೋರಿದರು.

ಲ| ಡ್ಯಾನಿ ಪೌಲ್ ಹಾಗೂ ಶ್ರೀ ಪ್ರಶಾಂತ್ ಕುಮಾರ್ ಶೇಟ್ ಹಾಗೂ ಎಲ್ಲಾ ಅತಿಥಿಗಳಿಗೆ ಸ್ಕ್ಯಾರ್ಫ್ ತೊಡಿಸಿ ಗೌರವಿಸಲಾಯಿತು

ಕಾರ್ಯದರ್ಶಿ ಪ್ರೀತಿ ಲೋಬೊ ಎಲ್ಲರನ್ನು ಸ್ವಾಗತಿಸಿದರು. ಕೋಶಾಧಿಕಾರಿ  ಸಂಧ್ಯಾ ರವರು ವಂದಿಸಿದರು. ಸಿ. ರೀಟಾ ಅವರು ನಿರೂಪಿಸಿದರು.

ಸಮಾರೋಪ ಸಮಾರಂಭದಲ್ಲಿ ಶಿಫಾಲ್ ರಾಜ್, ಪಿಂಗಾರ ಪತ್ರಿಕೆಯ ಸಂಪಾದಕ  ರೇಮಂಡ್‌ ಡಿಕೂನಾ ತಾಕೊಡೆ ಹಾಗೂ ಅಧ್ಯಕ್ಷ ವಸಂತ ರಾವ್ ಉಪಸ್ಥಿತರಿದ್ದು ಬಹುಮಾನ ವಿತರಣೆ ಮಾಡಿದರು.

ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಿದರು. 

ಬಹುಮಾನ ಪಡೆದ ಶಾಲೆಗಳ ವಿವರ ಹೀಗಿದೆ.

ಕಬ್ ವಿಭಾಗದಲ್ಲಿ 

ಪ್ರಥಮ ಸ್ಥಾನ- ನಝೆ ರತ್ ಶಾಲೆ, ಬಲ್ಮಠ 

ದ್ವಿತೀಯ ಸ್ಥಾನ - ಶಕ್ತಿ ವಸತಿ ಶಾಲೆ.

ತೃತೀಯ ಸ್ಥಾನ -ಸಂತ ಜೋಸೆಫ್ ಇಂಗ್ಲಿಷ್ ಮಾಧ್ಯಮ ಶಾಲೆ, ಬಜಾಲ್.


ಬುಲ್ ಬುಲ್ ವಿಭಾಗದಲ್ಲಿ 

ಪ್ರಥಮ ಸ್ಥಾನ - ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ ಬಜಾಲ್.

ದ್ವಿತೀಯ ಸ್ಥಾನ ಶ್ರೀರಾಮಕೃಷ್ಣ ಶಾಲೆ ಬಂಟ್ಸ್ ಹಾಸ್ಟೆಲ್ . 

ತೃತೀಯ ಸ್ಥಾನ ನಝರೆ ತ್  ಶಾಲೆ, ಬಲ್ಮಠ 


ಸ್ಕೌಟ್ ವಿಭಾಗದಲ್ಲಿ 

ಪ್ರಥಮ ಸ್ಥಾನ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ, ಕುಲಶೇಖರ 

ದ್ವಿತೀಯ ಸ್ಥಾನ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ, ಬಜಾಲ್ 

ತೃತೀಯ ಸ್ಥಾನ ನಝಾರೆತ್ ಶಾಲೆ ಬಲ್ಮಠ.


ಗೈಡ್ಸ್ ವಿಭಾಗದಲ್ಲಿ 

ಪ್ರಥಮ ಸ್ಥಾನ ನಝರೆತ್ ಶಾಲೆ,ಬಲ್ಮಠ 

ದ್ವಿತೀಯ ಸ್ಥಾನ ಕಾಸಿಯಾ ಪ್ರೌಢಶಾಲೆ ಜೆಪ್ಪು 

ತೃತೀಯ ಸ್ಥಾನ ಲೂರ್ಡ್ಸ್ ಅನುದಾನಿತ ಪ್ರೌಢ ಶಾಲೆ, ಬಿಜೈ 

 

ರಾಷ್ಟ್ರಗೀತೆಯನ್ನು ಹಾಡುವುದರೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.