ಮುಂಬಯಿ (ಆರ್‍ಬಿಐ), ಮೇ.05 : ಇತರ ಎಲ್ಲಾ ಆಸ್ತಿ ಸಂಪತ್ತಿಗಿಂತ ಶಿಕ್ಷಣವೇ ಅತೀ ದೊಡ್ಡ ಆಸ್ತಿಯಾಗಿದೆ. ಶಿಕ್ಷಣದ ಅತೀ ದೊಡ್ಡ ಹಬ್ ಆಗಿ ಬೆಳೆದಿರುವ ಮೂಡುಬಿದಿರೆಯಲ್ಲಿ ಶಿಕ್ಷಣದ ಸಕಲ ವ್ಯವಸ್ಥೆಗಳಿದೆ. ಶೀಘ್ರದಲ್ಲಿ ಇಲ್ಲಿ ಪೂರ್ಣಪ್ರಮಾಣದ ವೈದ್ಯಕೀಯ ಕಾಲೇಜು ಕೂಡಾ ತೆರೆದುಕೊಳ್ಳಲಿದ್ದು ವಿದ್ಯಾಥಿರ್sಗಳು ಈ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಮೂಡುಬಿದಿರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ಅಧ್ಯಕ್ಷ ನಿಶ್ಮಿತಾ ಗ್ರೂಪ್ಸ್ ಮಾಲಕ ನಾರಾಯಣ ಪಿ. ಎಂ. ನುಡಿದರು.

ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ (ರಿ.) ಇರುವೈಲು ಪುಚ್ಚಮೊಗರು ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಮಹಿಳಾ ಘಟಕ ಇರುವೈಲು ಪುಚ್ಚಮೊಗರು ಇದರ ಆಶ್ರಯದಲ್ಲಿ ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಮೇ. 4ರಂದು ಜರಗಿದ ಪುಸ್ತಕಾ ವಿತರಣಾ ಕಾರ್ಯಕ್ರಮ ಹಾಗೂ ವಿವಿಧ ವಿದ್ಯಾಥಿರ್s ವೇತನದ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭ ಗುಜರಾತ್ ಸಿಲ್ವಾಸದ ಉದ್ಯಮಿ ವೆಂಕಟೇಶ್ ಪೂಜಾರಿ ಅವರು ಕೊಡುಗೆಯಾಗಿ ನೀಡಿರುವ ಪುಸ್ತಕಗಳನ್ನು 500 ವಿದ್ಯಾಥಿರ್sಗಳಿಗೆ ವಿತರಿಸಲಾಯಿತು.

ಸಭಾಧ್ಯಕ್ಷತೆ ವಹಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ (ರಿ.) ಇರುವೈಲು  ಪುಚ್ಚಮೊಗರು ಇದರ ಅಧ್ಯಕ್ಷ ಕುಮಾರ್ ಪೂಜಾರಿ ಇರುವೈಲು ಮಾತನಾಡಿ ಒಳ್ಳೆಯ ನುಡಿ, ಗುಣ ನಡತೆ ಮತ್ತು ಆಚಾರ ವಿಚಾರಗಳೇ ಮನುಷ್ಯನಲ್ಲಿರಬೇಕಾದ ಅತೀ ದೊಡ್ಡ ಶ್ರೀಮಂತಿಕೆಯಾಗಿದ್ದು ಸವಲತ್ತುಗಳ ಕೊರತೆಯಿಂದ ಮಕ್ಕಳು ಶಿಕ್ಷಣದಲ್ಲಿ ಹಿಂದೆ ಉಳಿಯಬಾರದು ಎಂಬ ಉದ್ದೇಶದಿಂದ ಪ್ರತಿವರ್ಷ ಸಂಘದ ವತಿಯಿಂದ ಇಂತಹ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗುತ್ತಿದ್ದು ಕಾರ್ಯಕ್ರಮದ ಯಶಸ್ಸಿಗೆ ಕೈ ಜೋಡಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಪುಸ್ತಕ ವಿತರಣಾ ಕಾರ್ಯಕ್ರಮದ ಪ್ರಾಯೋಜಕ: ಗುಜರಾತ್ ಸಿಲ್ವಾಸದ ಉದ್ಯಮಿ ವೆಂಕಟೇಶ್ ಪೂಜಾರಿ, ಇರುವೈಲಿನ ಉದ್ಯಮಿ ಸತೀಶ್ಚಂದ್ರ ಸಾಲ್ಯಾನ್ ಪಾಣಿಲ, ಚಂದ್ರಶೇಖರ್ ಎಡಪದವು, ಶ್ರೀ ಕ್ಷೇತ್ರ ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷೆ ಸುಜಾತ ಜಯರಾಂ ಶೆಟ್ಟಿ, ಬ್ರಹ್ಮಶ್ರೀ ನಾ.ಗು.ಸ್ವಾ.ಸೇ. ಮಹಿಳಾ ಘಟಕದ ಅಧ್ಯಕ್ಷೆ ದೀಪಾ ದಿನೇಶ್, ಕಾರ್ಯದರ್ಶಿ ಪ್ರಮೀಳಾ ರಾಜೇಶ್, ಇರುವೈಲು ಗ್ರಾ.ಪಂ. ಅಧ್ಯಕ್ಷೆ ಲಲಿತಾ, ಇರುವೈಲು ದ.ಕ.ಜಿ.ಪ. ಹಿ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯಿನಿ ಜೆಸಿಂತಾ, ಹೊಸಬೆಟ್ಟು ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿ ಶ್ರೀಮತಿ ಇ. ಉಪಸ್ಥಿತರಿದ್ದರು.

ನಾರಾಯಣ ಪಿ.ಎಂ., ಚಂದ್ರಶೇಖರ ಎಡಪದವು, ಪುಸ್ತಕದಾನಿ ವೆಂಕಟೇಶ್ ಪೂಜಾರಿ, ಸುಜಾತಾ ಜೆ. ಶೆಟ್ಟಿ, ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೊಸಬೆಟ್ಟು ಪ್ರೌಢಶಾಲೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾಥಿರ್sನಿ ಸತೀಶ್ ಪೂಜಾರಿ ಹರಿಣಾಕ್ಷಿ ದಂಪತಿಗಳ ಪುತ್ರಿ ಸಮೀಕ್ಷಾ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಹೊಸಬೆಟ್ಟು ಸರಕಾರಿ ಪ್ರೌಢಶಾಲೆಯ ಅಭಿವೃದ್ಧಿ ನಿರಂತರ ಕೊಡುಗೆ ನೀಡುತ್ತಿರುವ ಇರುವೈಲು ಕುಮಾರ್ ಪೂಜಾರಿ ಮತ್ತು ಗುಜರಾತ್ ಸಿಲ್ವಾಸದ ಉದ್ಯಮಿ ವೆಂಕಟೇಶ್ ಪೂಜಾರಿ ಅವರನ್ನು ಸನ್ಮಾನಿಸಿದರು.

ದಿನೇಶ್ ಪೂಜಾರಿ ಕಟ್ಟಣಿಗೆ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ರವಿಪೂಜಾರಿ ತ್ಯಾಂಪೆಟ್ಟು ಪ್ರಾಥಿರ್sಸಿದರು. ಸ್ವಾತಿ ಗಣೇಶ್ ಕುತ್ಯಾಡಿ, ಪುಸ್ತಕ ವಿತರಣೆ ಕಾರ್ಯಕ್ರಮ ನಡೆಸಿ ವಂದಿಸಿದರು. ರಾಜೇಶ್ ಕಾಳೂರು, ಮುತ್ತಪ್ಪ ಸಾಲ್ಯಾನ್, ಪ್ರದೀಪ್ ಶೆಟ್ಟಿ, ಸೋಮಶೇಖರ್, ಪ್ರವೀಣ್ ಪೂಜಾರಿ, ಪ್ರಮೀಳಾ ರಾಜೇಶ್ ತಾರಾ ಜನಾರ್ದನ್, ರೇಣುಕಾ ಪ್ರಶಾಂತ್, ಹರಿಣಾಕ್ಷಿ ಸತೀಶ್ ಮತ್ತು ಸೇವಂತಿ ಅತಿಥಿಗಳನ್ನು ಗೌರವಿಸಿದರು.