ಮಾನವ ಮರದಲ್ಲಿರುವಾಗಲೇ ಕಸರತ್ತು ಮಾಡಲು ಕಲಿತವ. ಅದರ ಮುಂದುವರಿದ ಭಾಗವೇ ಸರ್ಕಸ್. 

ಹಿಂದೆ ಸರ್ಕಸ್ಸಿನಲ್ಲಿ ನಾಲ್ಕಾಣೆಯ ಗ್ಯಾಲರಿ ಇದ್ದವು. ಇಂದು ಗ್ಯಾಲರಿಗಳು ಇಲ್ಲ.

ಹುಲಿ, ಕರಡಿ, ಒಂಟೆ, ಸಿಂಹ, ನೀರಾನೆ, ಆನೆ, ಕುದುರೆ ಮೊದಲಾದ ಪ್ರಾಣಿಗಳು ಮಕ್ಕಳಿಗೆ ಚೋದ್ಯವೆನಿಸಿದ್ದವು. ಇಂದು ಕಾನೂನಿನ ಕಾರಣಕ್ಕೆ ಅವುಗಳಿಲ್ಲ. ನಾಯಿ ಇವೆ.

ಸರ್ಕಸ್ಸಿನ ಅಟ್ಟಣಿಗೆಯಲ್ಲಿ ಬ್ಯಾಂಡು ತಂಡ ಇರುತ್ತಿತ್ತು. ಇಂದು ರೆಕಾರ್ಡ್ ಮಾಡಿದ ಸಂಗೀತ.

ನಾನು ಮೊದಲ ಬಾರಿಗೆ ಜೋಕಾಲಿ ಆಟದಲ್ಲಿ ಹೆಣ್ಣು ಮಕ್ಕಳು ಇಲ್ಲದಿರುವುದನ್ನು ನೋಡಿದೆ.

ಭಾರತದ ಸರ್ಕಸ್ ಕಂಪೆನಿಗಳಲ್ಲಿ ಹಿಂದೆ ಕೇರಳದ ಯುವತಿಯರು ತುಂಬ ಇದ್ದರು. ಈಗ ಎಲ್ಲಿ? 

ಈಗ ಈಶಾನ್ಯ ಭಾರತದ ಅದರಲ್ಲೂ ಮಣಿಪುರದವರು ಹೆಚ್ಚಾಗಿ ಭಾರತದ ಸರ್ಕಸ್ ಕಂಪೆನಿಗಳಲ್ಲಿ ಇದ್ದಾರೆ.

ರೋಚಕತೆಗಳು ಇವೆ. ಆದರೆ ಮಿತಿಗೆ ಸಿಲುಕಿವೆ. 

300 ಜನರ ಹಾಗೂ ಪ್ರಾಣಿಗಳ ದೊಡ್ಡ ತಂಡವಾಗಿದ್ದ ಭಾರತದ ಸರ್ಕಸ್ ಕಂಪೆನಿಗಳಲ್ಲಿ ಇಂದು 100ರಷ್ಟು ಜನರೂ ಇಲ್ಲಿ.

ಟೆಂಟ್ ನಿರ್ಮಾಣದಲ್ಲಿ ವ್ಯತ್ಯಾಸವಾಗಿಲ್ಲ. ಟಿಕೆಟ್ ಬೆಲೆಯೇರಿಕೆ ಅದೂ ಸಹಜ ಬಿಡಿ.