ಮಂಗಳೂರು, ಮಾರ್ಚ್ 27: ಕುರಿ ಮತ್ತು ಮೇಕೆ ಮಾಂಸ ಒದಗಿಸುವುದು, ಆರೋಗ್ಯಯುತವಾದುದನ್ನು ಒದಗಿಸುವುದು ಸರಕಾರ ಮತ್ತು ಪಾಲಿಕೆಯ ಕರ್ತವ್ಯ. ನಾನು ಹಿಂದೆ ಸಚಿವನಾಗಿದ್ದಾಗ ಆಧುನಿಕ ಅನಾಟರ್ ಯೋಜಿಸಿದ್ದೆ. ಬಿಜೆಪಿಯವರು ಅದನ್ನೆಲ್ಲ ಹಾಳು ಮಾಡಿದ್ದಾರೆ ಎಂದು ಮಾಜೀ ಮಂತ್ರಿ ಯು. ಟಿ. ಖಾದರ್ ತಿಳಿಸಿದರು.

ಈಗ ಮಾಂಸದ ಪ್ರಾಣಿಯ ಆರೋಗ್ಯದ ಬಗೆಗೆ ಖಚಿತತೆಯಿಲ್ಲ, ಸ್ವಚ್ಛತೆಯ ಬಗೆಗೆ ಖಚಿತತೆಯಿಲ್ಲ. ಬಿಜೆಪಿಯ ಪಾಲಿಕೆಗೆ ಜವಾಬ್ದಾರಿ ಇಲ್ಲ. ಜನರಿಗೆ ಉತ್ತಮ ಮಾಂಸ ಒದಗಿಸುವ ಜವಾಬ್ದಾರಿ ನಿರ್ವಹಿಸಲಿ ಎಂದು ಖಾದರ್ ತಿಳಿಸಿದರು.

ಎಸ್ಸೆಸ್ಸೆಲ್ಸಿ ಮಕ್ಕಳು ಅದನ್ನೇ ಗುರಿಯಾಗಿಟ್ಟುಕೊಂಡು ಓದಿ ಉತ್ತಮ ರೀತಿಯಲ್ಲಿ ಪಾಸಾಗಿ ದೇಶದ ಆಸ್ತಿಯಾಗಲಿ. ಯಾವುದೇ ವಿವಾದ ಇದ್ದರೂ ಮಕ್ಕಳ ಶಿಕ್ಷಣ ಹಾಳಾಗಬಾರದು. ಸರಕಾರ ಮತ್ತು ಹೆತ್ತವರು ಮಕ್ಕಳ ಅದರಲ್ಲೂ ಹೆಣ್ಣು ಮಕ್ಕಳ ಓದಿಗೆ ಸಹಕಾರ ನೀಡಬೇಕು. ಮಕ್ಕಳ ನೆಮ್ಮದಿ ಕಾಪಾಡಬೇಕು. ಏನೇ ಬಂದರೂ ಪರೀಕ್ಷೆ ಬರೆಯದೆ ಉಳಿಯಬೇಡಿ ಎಂದು ಯುಟಿಕೆ ಹೇಳಿದರು.

ಎಲ್ಲ ಕಾಸಗಿ ವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಸಹಕರಿಸಲಿ. ಪ್ರಶ್ನೆಗೆ ಉತ್ತರಿಸುತ್ತ ಖಾದರ್ ಅವರು ಮಾಜೀ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ಧರ್ಮಗಳಿಗೆ ಗೌರವ ಕೊಡುತ್ತಾರೆ. ಬಿಜೆಪಿಯವರು ಎಲ್ಲವನ್ನೂ ತಿರುಚಿ ವಿವಾದ ಮಾಡುತ್ತಾರೆ. ಮೂಢನಂಬಿಕೆ ಮಸೂದೆ ತಂದಾಗ ಕೂಡ ಸಿದ್ದರಾಮಯ್ಯರ ವಿರುದ್ಧ ಸ್ವಾಮೀಜಿಗಳು ಪ್ರತಿಭಟನೆ ಮಾಡಿಲ್ಲ. ಆ ಮಸೂದೆ ಜಾರಿಗೆ ತಂದು ಬಿಜೆಪಿಯವರು ಸ್ವಾಮೀಜಿಗಳು ಎಲ್ಲದಕ್ಕೂ ಹೋರಾಟ ಮಾಡುವ ಸ್ಥಿತಿ ತಂದಿದ್ದಾರೆ. ಸಿದ್ದರಾಮಯ್ಯನವರು ಅರ್ಚಕರ ಸಹಿತ ಆಲಯ ಸಂಬಂಧಿ ಸುಧಾರಣೆ ತಂದವರು. ಬಿಜೆಪಿಯದು ಗೊಂದಲ ಮಾತ್ರ ಎಂದು ಖಾದರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸದಾಶಿವ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.