ಮಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ಸಂವಹನ ಮತ್ತು ಮಾಧ್ಯಮ ಸಮಿತಿ ಪ್ಯಾನಲಿಸ್ಟ್ ಆಗಿ ಮೂಡುಬಿದಿರೆಯ  ಕಾಂಗ್ರೆಸ್  ಮುಖಂಡರಾದ  ಪದ್ಮಪ್ರಸಾದ್ ಜೈನ್  ಅವರು ನೇಮಕಗೊಂಡಿದ್ದಾರೆ. ಪದ್ಮಪ್ರಸಾದ್ ಜೈನ್  ಅವರಿಗೆ ಮಾಧ್ಯಮ ಮತ್ತು ಸಂವಹನ ಕ್ಷೇತ್ರದಲ್ಲಿರುವ ತಿಳುವಳಿಕೆ ಹಾಗೂ ಅನುಭವ ಆಧಾರದಲ್ಲಿ ನೂತನ ಜವಾಬ್ದಾರಿಯನ್ನು ನೀಡಿರುವುದಾಗಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಎಂ.ಎ. ಎಲ್. ಎಲ್. ಬಿ ಪದವೀಧರರಾಗಿರುವ ಪದ್ಮಪ್ರಸಾದ್ ಜೈನ್  ಅವರು  ರಾಜ್ಯಮಟ್ಟದಲ್ಲಿ ಎನ್ ಎಸ್ ಯುಐ-ಉಪಾಧ್ಯಕ್ಷ, ಪಿವೈಸಿ ಕಾರ್ಯದರ್ಶಿ, ಕೆಪಿಸಿಸಿ ಲೀಗಲ್ ಸೆಲ್ ಪ್ರಧಾನ ಕಾರ್ಯದರ್ಶಿ, ಹಾಗೂ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ  ಸೇವೆಸಲ್ಲಿಸಿದ್ದಾರೆ. ಪ್ರಸ್ತುತ ಕೆಪಿಸಿಸಿ ಕೋ-ಆಡಿನೇಟರ್ ಆಗಿ  ಕೆಲಸ ನಿರ್ವಹಿಸುತ್ತಿದ್ದಾರೆ.