ಮಂಗಳೂರು:- ನಾಡೋಜ ಡಾ ಮಹೇಶ ಜೋಶಿ ಪಿಎಚ್.ಡಿ, ಡಿಲಿಟ್. ಐ. ಬಿ. ಎಸ್ (ಎ) ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಮುಂದಿನ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿ ಆಗಿರುತ್ತಾರೆ. ಡಾ ಮಹೇಶ್ ಜೋಷಿ ಅವರು ಈ ಸ್ಥಾನಕ್ಕೆ ಅತ್ಯಂತ ಯೋಗ್ಯ ಅಭ್ಯರ್ಥಿ ಆಗಿರುತ್ತಾರೆ. ಅವರು ಸಂತ ತಿರುನಾಳ ಶರೀಫರ ಗುರುಗಳಾದ ಕಳಸದ ಗುರು ಗೋವಿಂದ ಭಟ್ಟರ ವಂಶಜರು ದೂರದರ್ಶನ ಚಂದನದ ಜನಪ್ರಿಯ ಕಾರ್ಯಕ್ರಮ "ಮಧುರ ಮಧುರವೀ ಮಂಜುಳಗಾನ' ದ ರೂವಾರಿ 'ಥಟ್ ಅಂತ ಹೇಳಿ' ಕಾರ್ಯಕ್ರಮವನ್ನು ವಿಸ್ತಾರಗೊಳಿಸಿದ ಸುಧಾರಕರು, ಡಾ. ಮಹೇಶ್ ಜೊತಿಯವರನ್ನು ತಿಳಿಯದವರು ಯಾರೂ ಇಲ್ಲ. ಆದರೂ ಅವರ ಕಿರು ಪರಿಚಯವನ್ನು ಇಲ್ಲಿ ಮಾಡಿಕೊಡಲು ಸಂತೋಷವಾಗುತ್ತಿದೆ.
ಡಾ. ಮಹೇಶ್ ಜೋಶಿಯವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರತಿಷ್ಠಿತ 'ನಾಡೋಜ ಪ್ರಶಸ್ತಿ ಪುರಸ್ಕೃತರು ಗುಳಿರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪುರಸ್ಕೃತರು. “ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರು. ಇವರು ಮಾನ್ಯತೆ ಪಡೆದ ಸ್ವತಂತ್ರ ಮಾಧ್ಯಮ ವ್ಯಕ್ತಿ. ಹಲವು ಸಂಘ ಸಂಸ್ಥೆಗಳಿಗೆ ಮಾಧ್ಯಮ ಸಲಹೆಗಾರರು. ಹಲವು ವಿಶ್ವವಿದ್ಯಾಲಯಗಳಲ್ಲಿ ಗೌರವಾನ್ವಿತ ವಿಶಿಷ್ಟ ಪ್ರಾಧ್ಯಾಪಕರು, ಕರ್ನಾಟಕ ಪೌರ ರಕ್ಷಣಾ ದಳದ ಗೌರವಾನ್ವಿತ ಹೆಚ್ಚುವರಿ ಮುಖ್ಯ ಆಜ್ಞಾಧಿಕಾರಿಗಳಾಗಿ ರಾಷ್ಟ್ರಪತಿಗಳ ಪದಕ ಹಾಗೂ ಕರ್ನಾಟಕ ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕೃತರು, ಸಂತ ಶಿಶುನಾಳ ಶರೀಫರು ಹಾಗೂ ಕಳಸದ ಗುರು ಗೋವಿಂದ ಭಟ್ಟದ ಪ್ರತಿಷ್ಠಾನದ ಅಧ್ಯಕ್ಷರು. ದೂರದರ್ಶನ ಚಂದನ ,ದೆಹಲಿ ಮತ್ತು ದಕ್ಷಿಣ ಭಾರತ ಇದರ ವಿಶ್ರಾಂತ ಹೆಚ್ಚುವರಿ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ದೂರದೃಷ್ಟಿ ಪರಿಕಲ್ಪನೆ ಚಿಮ್ಮುವ ಉತ್ಸಾಹ ದೃಢತೆ ಹಾಗೂ ಬದ್ಧತೆ ಸಮಾಜದಲ್ಲಿ ಸೂಕ್ತ ಬದಲಾವಣೆಯನ್ನು ಉಂಟು ಮಾಡಬಲ್ಲದು, ಸೇವಾ ತತ್ಪರತೆಯನ್ನು ಹೊಂದಿರುವ ದಾರ್ಶನಿಕರು ಇವರು - ಕನ್ನಡ - ಸಾಹಿತ್ಯ ಪರಿಷತ್ತಿನೊಂದಿಗೆ ಇವರಿಗೆ ಅವಿನಾಭಾವ ಸಂಬಂಧವಿದೆ.
ದೂರದರ್ಶನ ಕಾರ್ಯಕ್ರಮಗಳ ಮುಖಾಂತರ ಎಲ್ಲಾ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಮನೆಮನೆಗೆ, ಮನಮನಕ್ಕೆ ಮುಟ್ಟಿಸಿದ ಕೀರ್ತಿ ಡಾ ಮಹೇಶ್ ಜೋಷಿ ಅವರಿಗೆ ಸಲ್ಲುತ್ತದೆ. ಹೊಸ ಕವಿಗಳ ಪುಸ್ತಕ ಪ್ರಕಟಣೆ ಮಾಡಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ . ಕರ್ನಾಟಕದ ಮೂಲೆ ಮೂಲೆಗಳಲ್ಲಿ ರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕನ್ನಡ ಡಿಂಡಿಮವನ್ನು ಬಾರಿಸಿದ ಮಹಾನ್ ವ್ಯಕ್ತಿ ಡಾ ಮಹೇಶ್ ಜೋಷಿಯವರು. ಶಿಗ್ಗಾವಿಯಲ್ಲಿ ನಡೆದ ಹಾವೇರಿ ಜಿಲ್ಲೆಯ 9ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನದ ಗೌರವ ಇವರಿಗೆ ಸಂದಿದೆ. ದಶಕಗಳ ಕಾಲ ದೂರದರ್ಶನ ಮಾಧ್ಯಮದಲ್ಲಿ ಸೇವೆ ಸಲ್ಲಿಸಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ರಾಯಭಾರಿ ಎಂದು ಜನಮಾನಸದಲ್ಲಿ ಗುರುತಿಸಲ್ಪಟ್ಟಿದ್ದಾರೆ .ಕನ್ನಡ ವೀಕ್ಷಕರಿಗೆ ದೂರವಾಗಿದ್ದ ದೂರದರ್ಶನವನ್ನು ಅನೇಕ ಜನಪ್ರಿಯ ಕಾರ್ಯಕ್ರಮಗಳ ಮುಖಾಂತರ ಮನೆಮನೆಗೆ, ಮನಮನಕ್ಕೆ ಮುಟ್ಟಿಸಿ ಸಮೀಪ ದರ್ಶನ ಮಾಡಿಸಿದ ಹೆಗ್ಗಳಿಕೆ ಡಾ ಮಹೇಶ್ ಜೋಶಿ ಅವರದ್ದು.
ಮಾನ್ಯ ರಾಷ್ಟ್ರಪತಿಗಳ ಹಾಗೂ ಪ್ರಧಾನ ಮಂತ್ರಿಗಳ ಕಾರ್ಯಕ್ರಮಗಳ ನೇರ ಪ್ರಸಾರವನ್ನು ಅತ್ಯದ್ಭುತವಾಗಿ ಯೋಜಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದ ಮೊದಲ ಕನ್ನಡಿಗ ಎನ್ನುವ ಹೆಮ್ಮೆ ಇವರದ್ದು. ಕನ್ನಡ ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಟ್ಟು ಜತೆಗೆ ನಿರ್ಣಾಯಕ ತೀರ್ಪುಗಳನ್ನು ನೀಡಿ ಅಳಿಸಲಾಗದ ದಾಖಲೆ ಸೃಷ್ಟಿಸಿದವರು. ಡಾ ಮಹೇಶ್ ಜೋಷಿ ಅವರು ಕರ್ನಾಟಕದ ಹೆಮ್ಮೆ ಕನ್ನಡದ ಹೆಮ್ಮೆಯ ಕುವರ, ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಕನ್ನಡ ಸಾಂಸ್ಕೃತಿ ಸಮ್ಮೇಳನ ಸಮಿತಿ ಅಧ್ಯಕ್ಷ ಕೆ.ಪಿ. ಮಂಜುನಾಥ್ ಸಾಗರ್, ಕಾರ್ಯದರ್ಶಿ ಡಾ. ಅಶೋಕ್ ಕುಮಾರ್ ಕಾಸರಗೋಡು, ಸಲಹಾ ಸಮಿತಿ ನಿರ್ದೇಶಕ ವಿ.ಜಿ. ಪಾಲ್, ಎಸ್. ಕೆ. ಮುನಿಸಿಪಾಲ್ ಎಂಪ್ಲಾಯಿಸ್ ಯೂನಿಯನ್ ರಿ. ಅಧ್ಯಕ್ಷರ ಬಾಲರಾಜ್ ಮತ್ತು ಪೂರ್ವಾಧ್ಯಕ್ಷ ಪಿ.ಬಿ. ಶಿವರಾಜ್ ಉಪಸ್ಥಿತರಿದ್ದರು.