ಮಂಗಳೂರು:- ಮಂಗಳೂರಿನ ಪತ್ರಿಕಾ ಭವನದಲ್ಲಿ ಕೆನರಾ ಬ್ಯಾಂಕ್ ಪರವಾಗಿ ಜನರಲ್ ಮ್ಯಾನೇಜರ್ ಯೋಗೀಶ್ ಆಚಾರ್ಯ ಅವರು ಮಾಸ್ಕ್ ಗಳನ್ನು ವಿತರಣೆ ಮಾಡಿದರು.
ಮಾಸ್ಕ್ ವಿತರಣೆ ಮಾಡಿದ ಯೋಗೀಶ್ ಆಚಾರ್ಯ ಅವರು ಮಾತನಾಡಿ ಪತ್ರಕರ್ತರಿಗೆ ಮುಕ್ತವಾಗಿ ವರದಿ ಮಾಡಲು ಅವಕಾಶ ನೀಡಿದರೆ ದೇಶದ ಪ್ರಜಾಪ್ರಭುತ್ವಕ್ಕೆ ಅನುಕೂಲ. ಕೋವಿಡ್ ಕಾಡಿದ ಕಾಲದಲ್ಲಿ ಪತ್ರಕರ್ತರು ಧೈರ್ಯದಿಂದ ಮುನ್ನುಗ್ಗಿ ತಮ್ಮ ಆರೋಗ್ಯ ಕಡೆಗಣಿಸಿ ವರದಿ ಮಾಡುತ್ತ ದೇಶಕ್ಕಾಗಿ ದುಡಿದಿದ್ದಾರೆ. ಅವರು ನಮಗೆ ಸಹಕಾರ ಕೊಟ್ಟಿದ್ದಾರೆ; ನಾವೂ ಅವರಿಗೆ ಸದಾ ಬೆಂಬಲ ನೀಡುವುದಾಗಿ ಹೇಳಿದರು.
ಕೆನರಾ ಬ್ಯಾಂಕಿನ ಪತ್ರಿಕಾ ಸಂಪರ್ಕದ ಮೇಘಾ ಶೆಟ್ಟಿಯವರು ತಮ್ಮ ಹುಟ್ಟು ಹಬ್ಬದ ನಡುವೆಯೂ ಈ ಮಾಸ್ಕ್ ವಿತರಣೆಯಲ್ಲಿ ಭಾಗವಹಿಸಿದರು. ಪತ್ರಕರ್ತರ ಸಂಘದ ಪರವಾಗಿ ಶ್ರೀನಿವಾಸ ನಾಯಕ್, ಜಗನ್ನಾಥ ಶೆಟ್ಟಿ ಬಾಳ, ಪುಷ್ಪರಾಜ್ ಶೆಟ್ಟಿ, ರೈ ಅವರುಗಳು ಪಾಲ್ಗೊಂಡರು.