ಉಡುಪಿ,(ಡಿಸೆಂಬರ್ 28) : ನಗರಸಭೆ ಮತ್ತು ತೋಟಗಾರಿಕಾ ಇಲಾಖೆ ಉಡುಪಿ ಇವರ ಸಹಯೋಗದೊಂದಿಗೆ ನಗರ ಮತ್ತು ಗ್ರಾಮೀಣ ಪ್ರದೇಶದ ಹಸಿ ತ್ಯಾಜ್ಯ ನಿರ್ವಹಣೆಗಾಗಿ ರೈತರನ್ನು ಸಂಯೋಜಿಸುವ ಕಾರ್ಯಗಾರವು ಡಿಸೆಂಬರ್ 29 ರಂದು ಬೆಳಿಗ್ಗೆ 10 ಗಂಟೆಗೆ ಉಡುಪಿಯ ಬ್ರಹ್ಮಲಿಂಗೇಶ್ವರ ರಸ್ತೆಯ ಕೋಡಿ-ಅಲೆವೂರಿನಲ್ಲಿ ನಡೆಯಲಿದ್ದು, ರೈತ ಬಾಂಧವರು ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.