ರಾಜ್ಯ ಸಭೆಯಲ್ಲಿ ಮಾಜೀ ಪ್ರಧಾನಿ ಮನಮೋಹನ್ ಸಿಂಗ್ ಅವರ ಮೊದಲ ಸಾಲಿನ ಸ್ಥಾನವನ್ನು ಬದಲಾಯಿಸಿ ಹಿಂದಿನ ಸಾಲಿನಲ್ಲಿ ಸ್ಥಾನ ಕಲ್ಪಿಸಲಾಗಿದೆ. ಈಗ ಗಾಲಿ ಕುರ್ಚಿ ಆಶ್ರಯಿಸಿರುವ ಮನಮೋಹನರಿಗೆ ಬಂದು ಹೋಗಲು ಈ ವ್ಯವಸ್ಥೆ ಎಂದು ಕಾಂಗ್ರೆಸ್ ಹೇಳಿದೆ.
90ರ ಪ್ರಾಯದ ಮನಮೋಹನ್ ಸಿಂಗ್ ಅವರ ರಾಜ್ಯ ಸಭಾ ಅವಧಿ ಕೂಡ ಹೆಚ್ಚು ಕಾಲ ಇಲ್ಲ. ರಾಜ್ಯ ಸಭೆಯಲ್ಲಿ ಕಾಂಗ್ರೆಸ್ ನಾಯಕ ಹಾಗೂ ಎಐಸಿಸಿ ಅಧ್ಯಕ್ಷರೂ ಆದ ಮಲ್ಲಿಕಾರ್ಜುನ ಖರ್ಗೆ ಅದೇ ಮೊದಲ ಸ್ಥಾನದಲ್ಲಿ ಇರುತ್ತಾರೆ. ಅವರ ಎದುರು ಉಪ ಸಭಾಪತಿ ಹರಿವಂಶರಾಯ್ ಸ್ಥಾನವಿದೆ.
ಕಾಂಗ್ರೆಸ್ ಕೆಲವು ಸ್ಥಾನ ಹೊಂದಾಣಿಕೆ ಮಾಡಿದ್ದು ಮೊದಲ ಸಾಲಿನಲ್ಲಿ ಹಿರಿಯ ಕಾಂಗ್ರೆಸ್ಸಿಗರಾದ ದಿಗ್ವಿಜಯ ಸಿಂಗ್ ಮತ್ತು ಪಿ. ಚಿದಂಬರಂರಿಗೆ ಸ್ಥಳ ಮಾಡಿ ಕೊಟ್ಟಿದೆ.
ಪ್ರತಿಪಕ್ಷಗಳಲ್ಲಿ ಮೊದಲ ಸಾಲಿನಲ್ಲಿ ಇರುವ ಇತರರೆಂದರೆ ಜೆಡಿಎಸ್‌ನ ಎಚ್. ಡಿ. ದೇವೇಗೌಡ, ಎಎಪಿಯ ಸಂಜಯ್ ಸಿಂಗ್, ಆರ್‌ಜೆಡಿಯ ಪ್ರೇಂ ಚಂದ್ ಗುಪ್ತ, ಟಿಎಂಸಿಯ ಡೆರಿಕ್ ಓಬ್ರೀನ್, ಬಿಅರ್‌ಎಸ್‌ನ ಕೇಶವರಾವ್, ಡಿಎಂಕೆಯ ತಿರುಚಿ ಶಿವ.