ಹಳೆಯಂಗಡಿ: ರಾಷ್ಟ್ರೀಯ ಹೆದ್ದಾರಿ 66 ರಿಂದ ಕವಲೊಡೆಯುವ ಹಳೆಯಂಗಡಿ ಕಿನ್ನಿಗೋಳಿ ಪ್ರಧಾನ ರಸ್ತೆಯ ಇಂದಿರಾನಗರದ ರೈಲ್ವೆ ಗೇಟ್‌ನ ಬಳಿ ಸಂಚರಿಸುತ್ತಿದ್ದ ರೈಲಿನ ಭೋಗಿಗಳು ಕಳಚಿ ಅರ್ಧದಲ್ಲಿಯೇ ಬಾಕಿಯಾಗಿದ ಘಟನೆ ಗುರುವಾರದಿಂದ ನಡೆದಿದೆ.
ಘಟನೆಯಿಂದ ಸುಮಾರು 20 ನಿಮಿಷಗಳ ಕಾಲ ಹೆಚ್ಚು ರೈಲ್ವೇ ಗೇಟ್ ಮುಚ್ಚುಗಡೆಯಿಂದ ಪ್ರಯಾಣಿಕರು ತೀವ್ರ ತೊಂದರೆ ಉಂಟಾಗಿ ಅನುಭವಿಸಬೇಕಾಯಿತು.
ಪಡುಬಿದ್ರಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಗೂಡ್ಸ್ ರೈಲಿನಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಬೋಗಿಯನ್ನು ಹೊಂದುಕೊಂಡಿದ್ದ ಗೂಡ್ಸ್ ಡಬ್ಬಿಗಳ ಹಾಗೂ ಇಂಜಿನ್‌ನ ನಡುವೆ ಸಂಪರ್ಕ ಕಡಿದುಕೊಂಡು ರೈಲ್ವೇ ಗೇಟ್‌ನ ಬಳಿಯಲ್ಲಿ ನಿಂತಿತು. ಭೋಗಿಗಳು ಕಳಚಿ ಸುಮಾರು ಎರಡು ಕಿಲೋಮೀಟರ್ ಇಂಜಿನ್ ಚಲಿಸಿದ್ದು ನಂತರ ಸುರತ್ಕಲ್‌ನಿಂದ ತಾಂತ್ರಿಕ ತಜ್ಞರು ಬಂದು ದುರಸ್ಥಿಗೊಳಿಸಿ ಗೂಡ್ಸ್ ರೈಲು ಸಂಚರಿಸಿತು. ಘಟನೆಯಿಂದಾಗಿ ಹಳೆಯಂಗಡಿ ಕಿನ್ನಿಗೋಳಿ ಸಂಚಾರ ವ್ಯತ್ಯಯಗೊಂಡು ವಾಹನ ಸವಾರರು ಸುತ್ತು ಬಳಸಿ ಪ್ರಯಾಣಿಸಬೇಕಾಯಿತು.