ಮಂಗಳೂರು, ಜು.22: ಮಣಿಪುರದ ನಾಚಿಕೆಗೇಡು ಕೃತ್ಯ ಖಂಡಿಸಿ ಕ್ರಿಶ್ಚಿಯನ್ ಸಮುದಾಯದವರು, ಕಮ್ಯೂನಿಸ್ಟ್ ಸಂಘಟನೆಗಳವರು, ಕಾಂಗ್ರೆಸ್ ನಾಯಕರು, ಸಮಾನ ಮನಸ್ಕರು ಇಂದು ಜುಲೈ 22 ಕ್ಲಾಕ್ ಟವರ್ ಬಳಿ ಮಳೆಯಲ್ಲಿ ಪ್ರತಿಭಟನೆ ನಡೆಸಿ ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಪಿ.ಆರ್.ಒ ರೋಯ್ ಕ್ಯಾಸ್ತಲಿನೊ, ಮಾಜಿ ಸಚಿವ ರಮಾನಾಥ ರೈ, ಮಾಜಿ ಮೇಯರ್ ಕವಿತಾ ಸನಿಲ್ , ಪ್ರತಿಭಾ ಕುಳಾಯಿ, ಶಾಲೆಟ್ ಪಿಂಟೊ, ಸುನಿಲ್ ಕುಮಾರ್ ಬಜಾಲ್, ಮಾಜಿ ಮೇಯರ್ ಕೆ. ಅಶ್ರಪ್, ಜನವಾದಿ ಸಂಘಟನೆಯ ಭಾರತಿ ಬೋಳಾರ, ಸ್ಟ್ಯಾನ್ಲಿ ಲೋಬೋ ಮತ್ತು ಹಲವಾರು ಭಾಗವಹಿಸಿದರು.