ಮಂಗಳೂರು ಧರ್ಮಪ್ರಾಂತ್ಯ ವಲಯದ ಆಯ್ದ 28 ತಂಡಗಳ ಸಿಮೀತ ಓವರಗಳ ಅಂಡರ್ ಆರ್ಮ್ ಕ್ರಿಕೆಟ್ "ಲೊರೆಟ್ಟೊ ಟ್ರೋಫಿ-2022" ಪಂದ್ಯಾಟವನ್ನು ಭಾರತೀಯ ಕಥೊಲಿಕ್ ಯವ ಸಂಚಲನ (ICYM) ಲೊರೆಟ್ಟೊ ಘಟಕದ ವತಿಯಿಂದ ಲೊರೆಟ್ಟೊ ಚರ್ಚ್ ಮೈದಾನದಲ್ಲಿ ಜನವರಿ 29 ಹಾಗೂ 30 ರಂದು ಯಶಸ್ವಿಯಾಗಿ ನೆರವೆರಿತು. 

ಮೊಡಂಕಾಪು ಇನ್ಫೆಂಟ್ ಜಿಸಸ್ ಚರ್ಚ್ ತಂಡವು ಫೈನಲ್ಸ್ ನಲ್ಲಿ ಸಂತ ಮಾರ್ಟಿನ್ ಚರ್ಚ್ ಬೆಳುವಾಯಿ ತಂಡವನ್ನು  ತಮ್ಮ ಕೆಚ್ಚೆದೆಯ ಆಟದಿಂದ 13 ರನ್ ಗಳಿಂದ ಸೋಲಿಸಿ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಸಮರೋಪ ಸಮಾರಂಭದಲ್ಲಿ ಯನ್ನು ವಿತರಿಸಿ ಮಾತನಾಡಿದ ಲೊರೆಟ್ಟೊ ಚರ್ಚ್ ಧರ್ಮಗುರು ಗಳಾದ ವಂದನೀಯ ಫ್ರಾನ್ಸಿಸ್ ಕ್ರಾಸ್ತಾ ಮತಾನಾಡಿ ಕಳೆದ ಎರಡು ದಿನಗಳಿಂದ ನಮ್ಮ ಧರ್ಮ ಪ್ರಾಂತ್ಯದ ವಿವಿಧ ಚರ್ಚ್ ಗಳ 'ಸುಮಾರು 28 ತಂಡಗಳಿಂದ ನೂರಾರು  ಕ್ರೀಡಾಪಟುಗಳ ಕ್ರಿಕೆಟ್ ಆಟದಿಂದ ನಮ್ಮೆಲ್ಲರಿಗೂ ಮನರಂಜನೆಯನ್ನು ನೀಡಿ ಯಾರೇ ಸೊಲಾಲಿ ಅಥವಾ ಗೆಲ್ಲಲಿ ಕ್ರಿಕೆಟ್ ಆಟ ಗೆದ್ದಿತು ಲೊರೆಟ್ಟೊ ಚರ್ಚ್ ಮೈದಾನ ಈ ಐತಿಹಾಸಿಕ ಮನರಂಜನೆಗೆ ಸಾಕ್ಷಿಯಾಯಿತು. ಸಮರೋಪ ಸಮಾರಂಭದಲ್ಲಿ ಲೊರೆಟ್ಟೊ ಆಂಗ್ಲಮಧ್ಯಮ ಶಾಲೆಯ ಮುಖೋಪಾಧ್ಯಯರಾದ ವಂದನೀಯ ಜೇಸನ್ ಮೊನಿಸ್ ಕನ್ನಡ ಮಧ್ಯಮದ ಮುಖ್ಯೋಪಾಧ್ಯಾಯಿನಿ ಭಗಿನಿ ಇಡೋಲಿನ್ ಚರ್ಚ್ ಪಾಲಾನಾ ಮಂಡಳಿಯ ಮಾಜಿ ಉಪಾಧ್ಯಕ್ಷರಾದ ಐಸಾಕ್ ವಾಸ್  ಕಾರ್ಯದರ್ಶಿ ಹಾಗೂ ಐಸಿವೈಎಮ್ ಸಚೇತಕರಾದ ಆಲ್ವಿನ್ ಪಿಂಟೊ,ಐಸಿವೈಎಮ್ ಕ್ರೀಡಾ ಕಾರ್ಯದರ್ಶಿಯಾದ ರಿಮ್ಸಲ್ ಡಿಸಿಲ್ವ ಹಾಗೂ   ಬ್ರೆಸಿಟಾ ಉಪಸ್ಥಿತರಿದ್ದರು. ಅಧ್ಯಕ್ಷರಾದ ಲೊಝಿಲ್ ವಂದಿಸಿದರು. ಮೇಲಿಶಾ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು