ಸರಕಾರಿ ಕಚೇರಿಗಳಲ್ಲಿ ಫೋಟೋ ತೆಗೆಯುವ ಮತ್ತು ವೀಡಿಯೋ ಚಿತ್ರೀಕರಣ ಮಾಡಲು ನಿಷೇಧ ವಿಧಿಸಿದ್ದನ್ನು ಕಳೆದ ತಡರಾತ್ರಿ ಸರಕಾರ ಹಿಂತೆಗೆದುಕೊಂಡಿತು. ಮುಖ್ಯಮಂತ್ರಿಗಳ ಅಧಿಕೃತ ವಾಟ್ಸ್‌ಆ್ಯಪ್ ಗುಂಪಿನಲ್ಲಿ ಇದನ್ನು ತಡ ರಾತ್ರಿ ಪ್ರಕಟಿಸಲಾಗಿದೆ.
ನಿನ್ನೆ ಮಧ್ಯಾಹ್ನವಷ್ಟೆ ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಸರಕಾರಿ ಕಚೇರಿಗಳಲ್ಲಿ ಫೋಟೋ ತೆಗೆಯುವ ಇಲ್ಲವೇ ವೀಡಿಯೋ ತೆಗೆಯುವುದನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಜಾಲ ತಾಣಗಳಲ್ಲಿ ಸರಕಾರದ 40% ಲಂಚಕ್ಕೆ ಪೂರಕವೇ ಎಂದು ಟೀಕಾ ಪ್ರಹಾರ ಹರಿದಿತ್ತು. ಅದಕ್ಕೆ ರಾತ್ರಿಯೇ ಸರಕಾರ ಆದೇಶ ಹಿಂಪಡೆದಿದೆ.
ಪಾರದರ್ಶಕ ಆಡಳಿತಕ್ಕಾಗಿ ಸರಕಾರಿ ಕಚೇರಿಗಳಲ್ಲಿ ಸಿಸಿಟೀವಿ ಅಳವಡಿಸುವ ನಿಯಮಾವಳಿ ಇದೆ. ಆದರೆ ಅದು 10% ಮಾತ್ರ ಪಾಲನೆಯಾಗಿದೆ ಎಂದು ತಿಳಿದು ಬಂದಿದೆ.