ಜಪ್ಪಿನಮೊಗರು ಕಡೇಕಾರ್ ಬಳಿ ಮಂಗಳೂರು ಮಹಾನಗರ ಪಾಲಿಕೆ ನಿರ್ವಹಿಸುತ್ತಿರುವ ದೃವತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಪ್ರತಿದಿನ 50ರಿಂದ 60ಟ್ಯಾಂಕರ್ಗಳ ಮುಖಾಂತರ ನಗರದ ಹೊರವಲಯದಿಂದ ತಂದು ತುಂಬಿಸುವ ಬಗ್ಗೆ ಹಾಗೂ ಹಾಗೂ ಪರಿಸರವು ದುರ್ನಾತದಿಂದ ವಾಸಿಸಲು ತೊಂದರೆಯಾಗುವ ಬಗ್ಗೆ ಸಾರ್ವಜನಿಕರು ಇಂದು ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರು ಕಚೇರಿಗೆ ಭೇಟಿ ನೀಡಿ ನೀಡಿದ್ದು, ಶಾಸಕರು ಮಂಗಳೂರು ಮಹಾನಗರ ಪಾಲಿಕೆಯ ಅಯುಕ್ತರಾದ ರವಿಚಂದ್ರ ನಾಯಕ್ ಹಾಗೂ ಉಪಅಯುಕ್ತ ನರೇಶ್ ಶೆಣೈಯವರನ್ನು ಕಛೇರಿಗೆ ಕರೆಯಿಸಿ, ಈ ಬಗ್ಗೆ ಪರಿಶೀಲನೆ ನಡೆಸುವಂತೆ ಮಾತುಕತೆ ನಡೆಸಿದರು. ಆಯಕ್ತರು ಈ ಸಮಸ್ಯೆಗೆ ಶೀಘ್ರ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದು, ಸಾರ್ವಜನಿಕರು ಮನವಿಗೆ ಸ್ಪಂದನೆ ನೀಡಿದ ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರಿಗೆ ಧನ್ಯವಾದ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರ ಪರವಾಗಿ ಸುಧಾಕರ್ ಜೆ. ಅನಿಲ್ ಡಿʼಸೋಜಾ ಸಂತೋಷ್ ಕಡೇಕಾರ್ ಐವನ್ ರೋಸಾರಿಯೊ, ರೀನಾ ಡಿʼಸೋಜಾ, ವಿದ್ಯಾ ಡಿʼಸೋಜಾ, ಮೇರಿ ಡಿʼಸೋಜಾ, ಲತಾ ಮುಂತಾದವರು ಉಪಸ್ಥಿತರಿದ್ದರು.