ಮೂಡಬಿದ್ರೆ: ಜವನೆರ್ ಬೆದ್ರ ಫೌಂಡೇಶನ್( ರಿ ) ವತಿಯಿಂದ ಈ ವರ್ಷದ ಪ್ರಥಮ ವನಮಹೋತ್ಸವ ಕಾರ್ಯಕ್ರಮ ಇಂದು ಜೂನ್ 23, 2024 ಬೆಳಿಗ್ಗೆ 9 ಗಂಟೆಗೆ ಕಲ್ಲಬೆಟ್ಟು ಶ್ರೀ ಮಹಾಮಾಯಿ ದೇಗುಲದ ಸಮೀಪ ನಡೆಯಿತು, ಸಂಘಟನೆಯ ಪ್ರಾಜೆಕ್ಟ್ *ಕದಂಬ ವನ* ಪ್ರಯುಕ್ತ ದೇಗುಲದ ಸುತ್ತಲೂ 9 ಕದಂಬ ಗಿಡಗಳನ್ನು ನೆಡಲಾಯಿತು, ಮಾವು, ಹಲಸು ಗಿಡಗಳು ಕೂಡ ನೆಡಲಾಯಿತು. 

ದೇಗುಲದ ಅರ್ಚಕರಾದ ಸೂರ್ಯ ಆರ್ ರಾವ್ ಗಿಡ ನೆಟ್ಟು ಚಾಲನೆ ನೀಡಿದರು, ಜವನರ್ ಬೆದ್ರ ಫೌಂಡೇಶನ್ ಸ್ಥಾಪಕ/ ಅಧ್ಯಕ್ಷ ಅಮರ್ ಕೋಟೆ, ಸಂಚಾಲಕ ನಾರಾಯಣ ಪಡುಮಲೆ, ಸಂಘಟನಾ ಕಾರ್ಯದರ್ಶಿ ಗುರುಪ್ರಸಾದ್, ಪ್ರಮುಖರುಗಳಾದ ಸುರೇಶ್ ಕಾಯಾರಗುಂಡಿ,ಸಂಪತ್ ಪೂಜಾರಿ, ಗಣೇಶ್ ಪೈ, ಪ್ರತಿಷ್ಠ ಸಮಗರ್ ಹಾಗೂ ಮಹಾಮಯಿ ಸೇವಾ ಸಮಿತಿಯ ಸದಸ್ಯರಾದ ಸುಧೀರ್ ಪೈ, ರಾಜೇಶ್ ಬೈಲೂರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.