ಮಂಗಳೂರು, ಜೂನ್ 06: ಅರಸು ಅವರು 6,000 ಜನರದಿದ್ದ ರಾಜ್ಯದ ಆಸ್ತಿ ಒಡೆತನವನ್ನು ಲಕ್ಷಾಂತರ ಜನರದಾಗಿಸಿದವರು. ಹಿಂದುಳಿದವರ, ಅಲ್ಪಸಂಖ್ಯಾತರ ಚಾಂಪಿಯನ್ ಅರಸು ಅವರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ ಎಂದು ಯುಟಿಕೆ ಹೇಳಿದರು.

ಕುದುರೆಮುಖ ಯೋಜನೆಯನ್ನು ಉದ್ಘಾಟನೆ ಮಾಡಿದವರು ದಿವಂಗತ ಇಂದಿರಾ ಗಾಂಧಿಯವರು. ಈಗ ಅದನ್ನೂ ಕಾಸಗಿಯವರಿಗೆ ಒಪ್ಪಿಸಲು ಈಗಿನ ಕೇಂದ್ರ ಸರಕಾರ ತೀರ್ಮಾನ ಮಾಡಿದೆ. ಕಬ್ಬಿಣದ ಉಂಡೆ ಮಾಡಲು ಈಗ 45% ತೆರಿಗೆ ಕೂಡ ಕೇಂದ್ರ ಸರಕಾರ ಹೇರಿದೆ. ಸರಕಾರದ ಏಕೈಕ ರಫ್ತು ಸಂಸ್ಥೆಯನ್ನು ಕಾಸಗಿಗೆ ಕೊಡಲು ಮೊದಲು ಮುಚ್ಚುವಂತೆ ಮಾಡುವ ಒಳ ಹುನ್ನಾರ ಬಿಜೆಪಿ ಕೇಂದ್ರ ಸರಕಾರದ್ದು. ಬಜೆಟ್ ಆದೇಶವೇ ಇಲ್ಲದೆ ಏಕಾಯೇಕಿ 45% ತೆರಿಗೆ ಎಂದರೆ ದಕ್ಷಿಣ ಕನ್ನಡದ ಉದ್ಯಮಕ್ಕೆ ವಂಚಿಸಲು ಕೇಂದ್ರ ಸರ್ಕಾರ ಮಾಡಿದ ದ್ರೋಹವಾಗಿದೆ. ಈ ಬಗೆಗೆ ಸಂಸದ ನಳಿನ್ ಕುಮಾರ್‌ರಿಗೆ ಹೇಳಿದ್ದೇನೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕಾಮರ್ಸ್ ಮಂತ್ರಿ ಪ್ರಹ್ಲಾದ್ ಜೋಶಿ ಇವರೆಲ್ಲ ಸೇರಿ ಈ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಇದನ್ನು ವಿರೋಧಿಸಿ ಪ್ರತಿಭಟನೆ ಮಾಡಲಿದೆ ಎಂದು ಖಾದರ್ ಹೇಳಿದರು.

ಇದು ಮೂಲ ತೆರಿಗೆ, ಅದರ ಮೇಲೆ ಲಾಭದ ತೆರಿಗೆಯೂ ಇದೆ. ಇದೇ ರೀತಿ ಟೆಲಿಕಾಂ ಮುಚ್ಚುವ, ಕಾಸಗಿಗೆ ಲಾಭ ಗಳಿಸುವ ಬಿಟ್ಟದ್ದೇಕೆ. ಮೊನ್ನೆಯವರೆಗೆ ತೆರಿಗೆಯೇ ಇಲ್ಲದ ಸಂಸ್ಥೆಗೆ ಒಮ್ಮೆಗೆ ತೆರಿಗೆ ಹೇರಿದರೆ ಹೇಗೆ? ಬಳ್ಳಾರಿ ಅದಿರು ತರುವುದು, ಚಿತ್ರದುರ್ಗದ ಹೊಸ ಕಬ್ಬಿಣದ ಗಣಿಗಳಿಗೆ ಲಾಭ ಮಾಡುವ ಹುನ್ನಾರ. ಒಟ್ಟಾರೆ ಕಾಂಗ್ರೆಸ್ ಮಾಡಿದ್ದನ್ನೆಲ್ಲ ಮಾರುತ್ತಿದ್ದಾರೆ. ಕುದುರೆ ಮುಖವಂತೂ ದಕ್ಷಿಣ ಕನ್ನಡ ಜಿಲ್ಲೆಯ ಗೌರವದ ಪ್ರಶ್ನೆ. ಅಲ್ಲಿನ ಮೂರೂವರೆ ಸಾವಿರ ಕೆಲಸಗಾರರ ಜೀವನದ ಪ್ರಶ್ನೆ ಏಳುತ್ತದೆ ಎಂದು ಯು. ಟಿ. ಖಾದರ್ ಹೇಳಿದರು.

ಸಾಂಕೇತಿಕ ಪ್ರತಿಭಟನೆಯಾಗಿ ಚಡ್ಡಿ ಸುಟ್ಟಿದ್ದಾರೆ. ದೇಶ ಬಾವುಟಕ್ಕೆ ಅವಮಾನ ಮಾಡಿದವರಿಗೆ ಈಗ ನೋವಾಗುತ್ತದೆಯೆ? ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷಗಳು ಉತ್ತರಿಸುವುದು, ಪ್ರತಿಭಟಿಸುವುದು ಸಹಜ ಪ್ರಕ್ರಿಯೆ ಎಂದು ಖಾದರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜೀ ಶಾಸಕರಾದ ಜೆ. ಆರ್. ಲೋಬೋ, ಶಕುಂತಲಾ ಶೆಟ್ಟಿ ಹಾಗೂ ಮಮತಾ ಗಟ್ಟಿ, ಶಮೀಮಾ, ಸಾಹುಲ್ ಹಮೀದ್, ಸದಾಶಿವ ಉಲ್ಲಾಳ್ ಮೊದಲಾದವರು ಉಪಸ್ಥಿತರಿದ್ದರು.

ಹಿಜಬ್ ಬಗೆಗೆ ಮತ್ತೆ ಎದ್ದ ಸಮಸ್ಯೆಗೆ ಕಾನೂನು ಪ್ರಕಾರವೇ ಪರಿಹಾರ ಕಾಣಬೇಕು. ಮಕ್ಕಳಿಗೆ ಶಿಕ್ಷಣ ಮುಖ್ಯ ಎನ್ನುವುದು ಸಹ ಪರಿಗಣಿಸಬೇಕು. ಓದಿನ ವರುಷದ ನಡುವೆ ಈ ತೀರ್ಮಾನ ಬಂದಿರುವುದು ತಪ್ಪು. ಇದನ್ನೂ ತೀರ್ಮಾನಿಸತಕ್ಕದ್ದು ಎಂದು ಪ್ರಶ್ನೆಯೊಂದಕ್ಕೆ ಖಾದರ್ ಉತ್ತರಿಸಿದರು.