ಧರ್ಮಸ್ಥಳ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅ.ಕ್ರ: 39/2025 ಕಲಂ:211 (ಎ) BNS ಪ್ರಕರಣವನ್ನು ದಿನಾಂಕ: 19.07.2025 ರಂದು ವಿಶೇಷ ತನಿಖಾ ತಂಡ (SIT) ಕ್ಕೆ ವರ್ಗಾಯಿಸಲಾಗಿರುತ್ತದೆ. ಇದರ ಹೊರತಾಗಿ ಈವರೆಗೆ  ಎಸ್‌.ಐ.ಟಿ ತಂಡದಿಂದ ಎರಡು ಅಸ್ವಾಭಾವಿಕ ಮರಣ (ಯುಡಿಆರ್) ಪ್ರಕರಣದ ದೂರುಗಳು ಮತ್ತು ಜಯಂತ್ ಎಂಬವರಿಂದ ಒಂದು ದೂರರ್ಜಿಯು ಧರ್ಮಸ್ಥಳ ಪೊಲೀಸ್ ಠಾಣೆಗೆ ವರದಿಯಾಗಿರುತ್ತದೆ.

A. ದಿನಾಂಕ: 31.07.2025 ರಂದು ಎಸ್‌.ಐ.ಟಿ ತಂಡ ಉತ್ಖನನ ಮಾಡುತ್ತಿದ್ದಾಗ ಒಂದು ಸ್ಥಳದಲ್ಲಿ ದೊರೆತ ಅಸ್ಥಿಪಂಜರದ ಅವಶೇಷಗಳಿಗೆ ಸಂಬಂಧಿಸಿದಂತೆ ಧರ್ಮಸ್ಥಳ ಠಾಣೆಯಲ್ಲಿ ಯು.ಡಿ.ಆರ್ ಸಂಖ್ಯೆ:35/2025 ಪ್ರಕರಣ. 

B. ಈಗಾಗಲೇ ಉತ್ಖನನಕ್ಕಾಗಿ ನಿಗಧಿಪಡಿಸಲಾಗಿರುವ ಸ್ಥಳಗಳ ಹೊರತಾಗಿ, ದಿನಾಂಕ: 04.08.2025 ರಂದು ಬೇರೆ ಜಾಗದಲ್ಲಿ, ಮಣ್ಣಿನ ಮೇಲೆ ಕಂಡುಬಂದ ಅಸ್ಥಿಪಂಜರದ ಅವಶೇಷಗಳಿಗೆ ಸಂಬಂಧಿಸಿದಂತೆ ಧರ್ಮಸ್ಥಳ ಠಾಣೆಯಲ್ಲಿ ದಿನಾಂಕ:05.08.25 ರಂದು ಯು.ಡಿ.ಆರ್ ಸಂಖ್ಯೆ:36/2025 ಪ್ರಕರಣ. 

C. ಜಯಂತ್ ಎಂಬವರು ನೀಡಿದ ದೂರಿಗೆ ಸಂಬಂಧಿಸಿದಂತೆ, ದಿನಾಂಕ: 04.08.2025 ರಂದು ಧರ್ಮಸ್ಥಳ ಠಾಣೆಯಲ್ಲಿ 200/DPS/2025 ರಂತೆ ದಾಖಲಾಗಿರುವ ದೂರರ್ಜಿ.

ಸದ್ರಿ 02 ಯು.ಡಿ.ಆರ್‌ ಪ್ರಕರಣಗಳನ್ನು ಮತ್ತು 01 ದೂರರ್ಜಿಯನ್ನು ಕೂಡಾ, ಮಾನ್ಯ ಡಿಜಿ ಮತ್ತು ಐಜಿಪಿರವರ ಅನುಮೋದನೆ ಪಡೆದು ವಿಶೇಷ ತನಿಖಾ ತಂಡ (SIT)ಕ್ಕೆ ವರ್ಗಾಯಿಸಲಾಗಿದೆ.