ಉಜಿರೆ: ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಬೆಂಗಳೂರಿನ ಚಂದ್ರಾ ಲೇ ಔಟ್ ನಲ್ಲಿರುವ ಸಾಯಿ ಫ್ಲವರ್ ಡೆಕೊರೇಟರ್ಸ್ ಸಂಸ್ಥೆಯ ಆಶ್ರಯದಲ್ಲಿ ಗೋಪಾಲ ರಾವ್, ಶ್ರವಣ ಮೂರ್ತಿ ಮತ್ತು ಆನಂದ್ ನೇತೃತ್ವದಲ್ಲಿ ಭಕ್ತರು ಧರ್ಮಸ್ಥಳಕ್ಕೆ ಬಂದು ದೇವಸ್ಥಾನ, ಬೀಡು (ಧರ್ಮಾಧಿಕಾರಿಗಳಾದ ಹೆಗ್ಗಡೆಯವರ ನಿವಾಸ) ಮೊದಲಾದ ಕಟ್ಟಡಗಳನ್ನು ಅಲಂಕಾರ ಸೇವೆ ಮಾಡಿ ಧನ್ಯತೆಯನ್ನು ಹೊಂದಿದರು.
ಕಳೆದ ಐದು ದಿನಗಳಿಂದ 45 ಮಂದಿ ಅಲಂಕಾರ ಸೇವೆಯಲ್ಲಿ ನಿರತರಾಗಿದ್ದು ಶುಕ್ರವಾರ ಸೇವೆ ಪೂರ್ಣಗೊಂಡಿದೆ.
ವಿವಿಧಜಾತಿಯ ಹಣ್ಣುಗಳು, ಹೂಗಳು ಮತ್ತು ಪ್ರಾಕೃತಿಕವಾಗಿ ದೊರಕುವ ಎಲೆಗಳನ್ನು ಬಳಸಿ ಪ್ರಕೃತಿ-ಪರಿಸರ ಸಂರಕ್ಷಣೆಗೂ ಆದ್ಯತೆ ನೀಡಲಾಗಿದೆ.
ಅಲಂಕಾರಕ್ಕೆ ಬಳಸಿದ ಹಣ್ಣುಗಳು: ದಾಳಿಂಬೆ, ಬೇಲದ ಕಾಯಿ, ಜೋಳ, ಎಳನೀರು, ಬಾಳೆಹಣ್ಣು, ಅಡಿಕೆ, ತೆಂಗು, ಕಬ್ಬು, ತೆಂಗಿನಗರಿ (ತುಳು: ಮಡಲು)
ಹೂಗಳು: ಗುಲಾಬಿ, ಸೇವಂತಿಗೆ, ಕ್ರಿಸ್‍ಅಂತೋರಿಯಂ, ಸುಗಂಧರಾಜ, ಸೇವಂತಿಗೆ, ಕಾರ್ನಿಶಿಯಾ, ಆರ್ಕಿಡ್.
ಎಲೆಗಳು: ತೆಂಗಿನಗರಿ, ಎಳೆಗರಿ, ಸೈಬ್ರೋಸ್, ಡ್ರೆಸಿನಾ
ಪರಿಕರಗಳ ಸಂಗ್ರಹ, ಸಾಗಾಟ, ಅಲಂಕಾರ ಸೇವೆ ಇತ್ಯಾದಿಗಳನ್ನು ಭಕ್ತಾದಿಗಳೆ ಉಚಿತವಾಗಿ ಮಾಡಿದ್ದಾರೆ.
ಪ್ರತಿ ವರ್ಷ ಹೊಸ ವರ್ಷಆಚರಣೆ ಸಂದರ್ಭದಲ್ಲಿ ತಾವು ದೇವಸ್ಥಾನದ ಅಲಂಕಾರ ಸೇವೆ ಮಾಡುತ್ತಿದ್ದುತಮ್ಮ ವ್ಯವಹಾರದಲ್ಲಿ ಲಾಭದಾಯಕವಾಗಿ ಪ್ರಗತಿ ಸಾಧಿಸಿದ್ದೇವೆ. ಎಲ್ಲಕ್ಕಿಂತ ಮಿಗಿಲಾಗಿ ಮನೆಯಲ್ಲಿ ಹಾಗೂ ಮನದಲ್ಲಿ ಸುಖ, ಶಾಂತಿ, ನೆಮ್ಮದಿ ಮತ್ತು ಸಂತೋಷ ದೊರಕಿದೆ ಎಂದು ಸಾಯಿ ಫ್ಲವರ್ ಡೆಕೊರೇಟರ್ಸ್ ಮಾಲಕ ಗೋಪಾಲ ರಾವ್ ತಿಳಿಸಿದ್ದಾರೆ.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಲಂಕಾರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿ ಭಕ್ತರನ್ನು ಅಭಿನಂದಿಸಿದ್ದಾರೆ.