ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಡಿಸೆಂಬರ್ 24ರ ಶನಿವಾರ ಬೆಳಿಗ್ಗೆ ಭಾರತ್ ಜೋಡೋ ಯಾತ್ರೆಯು ಹರಿಯಾಣದ ಬರದಾಬಾದಿನ ಬರದ್ಪುರ ಮೆಟ್ರೋ ದಾಟಿ‌ ದಿಲ್ಲಿಯ ಎಲ್ಲೆಯೊಳಗೆ ಪ್ರವೇಶಿಸಿತು. ದಿಲ್ಲಿ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಚೌಧರಿ ತಂಡ ಎಲ್ಲರನ್ನೂ ಸ್ವಾಗತಿಸಿತು. 

ಭೂಪಿಂದರ್ ಸಿಂಗ್ ಹೂಡ, ಕುಮಾರಿ ಸೆಲ್ವಾ, ಶಶಿಕಾಂತ್ ಗೋಹಿಲ್, ರಣದೀಪ್ ಸುರ್ಜೇವಾಲ ಮೊದಲಾದ ಕಾಂಗ್ರೆಸ್ ನಾಯಕರು ಇಂದು ಬೆಳಿಗ್ಗೆ ರಾಹುಲ್ ಗಾಂಧಿಯವರ ಜೊತೆಗೆ ನಡೆದು ಬಂದರು.

ದಿಲ್ಲಿಯಲ್ಲಿ ನಿಜಾಮುದ್ದೀನ್, ಇಂಡಿಯಾ ಗೇಟ್ ಮೊದಲಾದ ಸ್ಥಳಗಳಲ್ಲಿ ಸಂಚರಿಸಿ ಕೆಂಪು ಕೋಟೆಯಲ್ಲಿ ಯಾತ್ರೆ ದೀರ್ಘ ವಿಶ್ರಾಂತಿ ತೆಗೆದುಕೊಳ್ಳಲಿದೆ. ಹೊಸ ವರುಷದ ಪ್ರಯಕ್ತ ಭಾರತ್ ಜೋಡೋ ಯಾತ್ರೆಗೆ ಒಂಬತ್ತು ದಿನ ರಜೆ. ಜನವರಿ 3ರಿಂದ ಕಾಶ್ಮೀರದತ್ತ ಹೊರಡಲಿದೆ.