ಮೂಡುಬಿದಿರೆ ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯಲ್ಲಿ ಅಕ್ಟೋಬರ್ 30 ರಂದು ಭೃಷ್ಟಾಚಾರ ವಿರೋಧಿ ದಿನಾಚರಣೆಯನ್ನು ಆಚರಿಸಲಾಯಿತು. ಬೆಂಗಳೂರು ಸೂರ್ಯ ಫೌಂಡೇಶನ್ ನ ದ.ಕ.ಜಿಲ್ಲಾ ಸಂಯೋಜಕ, ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ದ.ಕ.ಜಿಲ್ಲಾ ಗ್ರಾಹಕ ಸಂಘಟನೆ ಒಕ್ಕೂಟದ ಜೊತೆ ಕಾರ್ಯದರ್ಶಿ, ರಾಜ್ಯ ಸಂಪನ್ಮೂಲ ವ್ಯಕ್ತಿ ರಾಯಿ ರಾಜ ಕುಮಾರ ಮೂಡುಬಿದಿರೆ ಯವರು ಆಗಮಿಸಿದ್ದರು. ಅವರು ತಮ್ಮ ಭಾಷಣದಲ್ಲಿ ಭೃಷ್ಟಾಚಾರ ಇಂದು ಎಲ್ಲೆಲ್ಲೂ ತಾಂಡವವಾಡುತ್ತಿದೆ. ನಾವು ಸತ್ಯ, ನಿಷ್ಠೆ, ಪ್ರಾಮಾಣಿಕತೆ ಯಿಂದ ಯಾರಿಗೂ ಹೆದರದೆ ಎಲ್ಲವನ್ನೂ ಎದುರಿಸಿದರೆ ಎಂತಹವರೂ ಎದೆಗುಂದುತ್ತಾರೆ. ಆ ರೀತಿಯಲ್ಲಿ ನಮ್ಮ ಬದುಕು ಇರಬೇಕು. ಲಂಚ ಸ್ವೀಕಾರ, ನೀಡುವಿಕೆ ಎರಡೂ ಅಪರಾಧ. ಎಂದೆಂದೂ, ಯಾವ ಸಂದರ್ಭದಲ್ಲೂ ಲಂಚ ನೀಡದೇ ನಿಯಮ ಪ್ರಕಾರ ನಡೆದರೆ ಯಶಸ್ಸು ಶತಸಿದ್ಧ ಎಂದು ತಿಳಿಸಿದರು. 

ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿ ತೆರೆಸಾ ಕರ್ಡೋಜಾ ಹಾಜರಿದ್ದರು. 

ಶಿಕ್ಷಕ ಶಂಕರ ಭಟ್ ಸ್ವಾಗತಿಸಿ, ವಂದಿಸಿದರು.