ಮೂಡಬಿದ್ರಿ: ಮೂಡಬಿದಿರೆ ಇಲ್ಲಿನ ಶ್ರೀ ಜೈನ ಮಠದ ಪೀಠಾಧ್ಯಕ್ಷ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಶ್ರೀ ಶ್ರೀ  ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಅವರು  ಪೂಜ್ಯ ಪರ್ಯಾಯ ಪುತ್ತಿಗೆ ಶ್ರೀ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಅಪೇಕ್ಷೆಯಂತೆ  ಕಳೆದ ರವಿವಾರ (ಜೂ. 23) ಶ್ರೀಕೃಷ್ಣ ಮಠಕ್ಕೆ  ಭೇಟಿ  ನೀಡಿ  ಶ್ರೀಕೃಷ್ಣ, ಮುಖ್ಯ ಪ್ರಾಣ ಗರುಡ ದೇವರ ದರ್ಶನ ಪಡೆದರು.

ಬಳಿಕ ಪೂಜ್ಯ ಪರ್ಯಾಯ ಶ್ರೀಪಾದರು ಗೀತಾಮಂದಿರದಲ್ಲಿ ಶ್ರೀಗಳನ್ನು ಅಭಿನಂದಿಸಿದರು .ಪುತ್ತಿಗೆ ಸ್ವಾಮೀಜಿ ಮೂಡು ಬಿದಿರೆ ಶ್ರೀಗಳಿಗೆ ಗೀತಾ ಭವನ ವೀಕ್ಷಣೆ ಮಾಡಿಸಿ ಅಖಂಡ ಗೀತಾ ಪಾರಾಯಣ ಕಾರ್ಯಕ್ರಮ, ಮಹಾ ಮಂಗಳ ಆರತಿ ಯಲ್ಲಿ ಬಾಗಿಯಾಗಿ ಧರ್ಮ ಚರ್ಚೆ ನಡೆಸಿ ಉಭಯ ಶ್ರೀ ಗಳು ಗೌರವ ವಿನಿಮಯ ಮಾಡಿ ಕೊಂಡರು.

ಅಖಂಡ ಗೀತಾ ಪಾರ ಯಣ ಮಾಡಿದ ಬೆಂಗಳೂರು ತಂಡದವರಿಗೆ ಉಭಯ ಶ್ರೀ ಶ್ರೀ ಗಳು ಹರಸಿ ಆಶೀರ್ವಾದ ಮಾಡಿದರು