ಮಂಗಳೂರು: “ಗಿಡಮರಗಳನ್ನು ಬೆಳೆಸಿ ಪರಿಸರವನ್ನು ಉಳಿಸಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಪರಿಸರದಲ್ಲಿ ಮರಗಿಡಗಳು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಗಿಡ ಮರಗಳನ್ನು ಪ್ರತಿಯೊಬ್ಬರು ನೆಟ್ಟು ಬೆಳೆಸಬೇಕು. ಎಲ್ಲರು ನಮ್ಮ ಹಸಿರು ಪರಿಸರವನ್ನು ಹಾಳಾಗದಂತೆ ಉಳಿಸಲು ಹೋರಾಡಬೇಕು” ಎಂದು ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ಪ್ರಾಂಶುಪಾಲರಾದ ವಂ| ಫಾ| ರಾಬರ್ಟ್ ಡಿಸೋಜ  ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅವರು ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‍ನಲ್ಲಿ ಆಯೋಜಿಸಿದ ‘ವನಮಹೋತ್ಸವ ಸಪ್ತಾಹ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಹೆತ್ತವರೊಂದಿಗೆ ಮನೆಗಳಲ್ಲಿ ಗಿಡ ನೆಡುವ ಕಾರ್ಯಕ್ರಮದೊಂದಿಗೆ  “ಮನೆಗೊಂದು ಮರ ಊರಿಗೊಂದು ವನ” ಜಾಗ್ರತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲೆಯರಾದ ಬೆಲಿಟಾ ಮಸ್ಕರೇನ್ಹಸ್ ಅನಿತಾ ಥೋಮಸ್, ಶಿಕ್ಷಕಿ ಸೌಮ್ಯ ಕೆ ಮತ್ತು ಪ್ರೀತಿ ಕೆ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ವನಮಹೋತ್ಸವದ ಮಹತ್ವವನ್ನು ಶಿಕ್ಷಕರ ನೆರವಿನೊಂದಿಗೆ ಪ್ರಸ್ತುತ ಪಡಿಸಿದರು. ವನಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಿ ಪರಿಸರ ಜಾಗೃತಿಯ ಅರಿವನ್ನು ನೀಡಲಾಯಿತು. ವನಮಹೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಅವರ ಪ್ರತಿಭೆಯನ್ನು ಹೊರ ಹೊಮ್ಮಿಸಲು ಅವಕಾಶವನ್ನು ಒದಗಿಸಲಾಯಿತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಾದ ಶ್ರೇಯಾ ಹೆಗ್ಡೆ, ಅನುಷಾ ನಾಯಕ್, ವನಮಹೋತ್ಸವದ ಅರಿವನ್ನು ಮೂಡಿಸುವ ಮರಗಳ ಸಂರಕ್ಷಣೆಯ ಮಾಹಿತಿಯನ್ನು ನೀಡಿದರು.