ಕೋಚಿಂಗ್ ಸೆಂಟರ್‌ಗಳು 16 ವಯಸ್ಸಿಗಿಂತ ಚಿಕ್ಕ ಪ್ರಾಯದವರನ್ನು ಸೇರಿಸಿಕೊಳ್ಳುವಂತಿಲ್ಲ ಎಂದು ಒಕ್ಕೂಟ ಸರಕಾರವು ಹಲವು ನಿಯಂತ್ರಣ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಹುಸಿ ಭರವಸೆ, ರಿಯಾಂಕ್ ಗ್ಯಾರಂಟಿ, ಖಚಿತ ಪಾಸು ಆಶ್ವಾಸನೆಗಳನ್ನು ಕೋಚಿಂಗ್ ಸೆಂಟರ್‌ಗಳು ನೀಡುವಂತಿಲ್ಲ. ಪ್ರತಿ ಕೋಚಿಂಗ್ ಸೆಂಟರ್ ಶುಲ್ಕ, ವಿದ್ಯಾರ್ಥಿಗಳು ಮೊದಲಾದ ವಿವರಗಳ ವೆಬ್ ಸೈಟ್ ಹೊಂದಿರಬೇಕು. ಸೂಕ್ತ ಪದವಿ ಪಡೆದವರನ್ನು ಮಾತ್ರ ಕಲಿಸಲು ನೇಮಿಸಿಕೊಳ್ಳಬೇಕು. ಅಪರಾಧ ಆರೋಪಿ, ಶಿಕ್ಷೆಗೆ ಒಳಗಾದವರನ್ನು ಕೆಲಸಕ್ಕೆ ಬೋಧನೆಗೆ ಇಟ್ಟುಕೊಳ್ಳುವಂತಿಲ್ಲ ಇತ್ಯಾದಿಯನ್ನು ಮಾರ್ಗಸೂಚಿ ಸ್ಪಷ್ಟಪಡಿಸಿದೆ.