ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಅಕ್ಕಿ ಆಲೂರದ ನಾಲ್ಕರ್ ಕ್ರಾಸ್‌ನಲ್ಲಿ ಜನವರಿ 8ರಂದು ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರನ್ನು ಬಂಧಿಸಿದ್ದು ಆರೋಪಿಗಳ ಸಂಖ್ಯೆ ಹತ್ತಕ್ಕೆ ಏರಿದೆ.

ಅಕ್ಕಿ ಆಲೂರ ಮೀನು ‌ವ್ಯಾಪಾರಿ 27ರ ಇಬ್ರಾಹಿಂ ಖಾದರ್ ಗೌಸ್, ಕಾರು ಚಾಲಕ 25ರ ತೌಸಿಫ್ ಅಹ್ಮದ್ ಚೌಟಿ ಅವರನ್ನು ಗುರುವಾರ ಬಂಧಿಸಲಾಯಿತು.  ಆರೋಪಿ ಮುಹಮ್ಮದ್ ಸೈಫ್ ಸಾವಿಕೇರಿ ಅಪಘಾತದಲ್ಲಿ ಕಾಲು ಮುರಿದುಕೊಂಡಿದ್ದಾನೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಗುಣ ಹೊಂದುತ್ತಲೇ ಬಂಧಿಸಲಾಗುವುದು ಎಂದು ಪೋಲೀಸರು ತಿಳಿಸಿದ್ದಾರೆ.