ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಬಗ್ಯೆ  ಮಾಧ್ಯಮಗಳಲ್ಲಿ  ಪ್ರಕಟವಾದ ಸುಳ್ಳುವದಂತಿ ಹಾಗೂ ಅಪಪ್ರಚಾರವನ್ನು ಖಂಡಿಸಿ ಬೆಂಗಳೂರಿನ ಪಾದಯಾತ್ರಿಗಳ ಸಂಘದ ಸ್ಥಾಪಕಾಧ್ಯಕ್ಷ ಹನುಮಂತಪ್ಪ ಗುರೂಜಿ ನೇತೃತ್ವದಲ್ಲಿ ಒಂದು ಸಾವಿರ ಮಂದಿ ಭಕ್ತಾದಿಗಳು ಸೋಮವಾರ ನೇತ್ರಾವತಿ ಸ್ನಾನಘಟ್ಟದಿಂದ ದೇವಸ್ಥಾನದ ವರೆಗೆ ಶಿವಪಂಚಾಕ್ಷರಿ ಪಠಣದೊಂದಿಗೆ ಪಾದಯಾತ್ರೆಯಲ್ಲಿ ಬಂದು ದೇವರ ದರ್ಶನ ಮಾಡಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ. ಧರ್ಮಸ್ಥಳ ಎಂದಿನಂತೆ ಲಕ್ಷಾಂತರ ಭಕ್ತಾದಿಗಳ ಅತಿಶಯ ಕ್ಷೇತ್ರವಾಗಿ ಬೆಳೆಯಲಿ, ಬೆಳಗಲಿ ಎಂದು ಅವರು ದೇವರಲ್ಲಿ ಪ್ರಾರ್ಥಿಸಿದರು.

ಬಳಿಕ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಮನ್ನು ಭೇಟಿಯಾಗಿ ಆಶೀರ್ವಾದ ಪಡೆದರು.