ವರದಿ ರಾಯಿ ರಾಜಕುಮಾರ ಮೂಡುಬಿದಿರೆ 


ಮೂಡುಬಿದಿರೆ:  ಸಾರ್ವಜನಿಕ ಗಣೇಶೋತ್ಸವ ಪ್ರಯುಕ್ತ 62 ನೇ ವರ್ಷದ ಸಿದ್ಧತೆ ಸಂಬಂಧಿಸಿದಂತೆ ಹಸಿರು ವಾಣಿ ಹೊರೆ ಕಾಣಿಕೆ ಸಮರ್ಪಣೆ ಮತ್ತು ಗಣಪತಿ ಪೀಠ ಮೆರವಣಿಗೆ ಆಗಸ್ಟ್ 26 ರಂದು ನಡೆಯಿತು. 

ಎಂ ಸಿ ಎಸ್ ಸೊಸೈಟಿಯಿಂದ ಪ್ರಾರಂಭವಾದ ಮೆರವಣಿಗೆ ಸಮಾಜ ಮಂದಿರಕ್ಕೆ ಆಗಮಿಸಿತು. ಮೆರವಣಿಗೆಯಲ್ಲಿ ಸಮಿತಿಯ ಅಧ್ಯಕ್ಷ ನಾರಾಯಣ ಪಿ ಎಂ, ಮಾಜಿ ಅಧ್ಯಕ್ಷ ಶ್ರೀಪತಿ ಭಟ್,  ಪ್ರಧಾನ ಕಾರ್ಯದರ್ಶಿ ಸುದರ್ಶನ್ ಎಂ, ಉಪಾಧ್ಯಕ್ಷರುಗಳಾದ ಕೊರಗ ಶೆಟ್ಟಿ, ರಾಜಾರಾಮ್ ನಾಗರಕಟ್ಟೆ, ಇತರ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು. ಅಲಂಗಾರು ಸುಬ್ರಹ್ಮಣ್ಯ ಭಟ್ ಪೂಜಾ ಕೈಂಕರ್ಯ ನೆರವೇರಿಸಿದರು.