2020ರಲ್ಲಿ ಹತ್ಯೆಗೀಡಾಗಿದ್ದ ಇರಾನಿನ ಇಸ್ಲಾಮಿಕ್ ಕ್ರಾಂತಿಕಾರಿ ಸೇನೆಯ ಜನರಲ್ ಕಾಸಿಂ ಸುಲೇಮಾನಿಯವರ ಸಮಾಧಿ ಬಳಿ ನಡೆದ ಎರಡು ಬಾಂಬ್ ಸ್ಫೋಟದಲ್ಲಿ 103ಕ್ಕೂ ಹೆಚ್ಚು ಜನರು ಮೃತರಾದರು. ಅಲ್ಲದೆ 170ಕ್ಕೂ ಹೆಚ್ಚು ಜನರು ಗಾಯಗೊಂಡರು. ಮಧ್ಯ ಇರಾನಿನ ಕೆಮ್ರಾನ್ ನಗರದಲ್ಲಿ ಜನರಲ್ ಸಮಾಧಿ ಬಳಿ ಈ ಜೋಡಿ ಸ್ಫೋಟ ಸಂಭವಿಸಿದೆ.

ಜನರಲ್ ಸುಲೇಮಾನಿಯವರು ಇರಾಕಿನ ಬಾಗ್ದಾದ್ ವಿಮಾನ ನಿಲ್ದಾಣದಲ್ಲಿ ಇಳಿದು ಬರುವಾಗ ಅವರನ್ನು ದ್ರೋಣ್ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಅದರಲ್ಲಿ ಯುಎಸ್‌ಎ ಕೈವಾಡ ಇದ್ದ ಆರೋಪ‌ ಇದೆ. ಅವರ ಸಾವಿನ ದಿನವೇ ಈ‌ ರಕ್ತ ಸಿಕ್ತ ಬಾಂಬ್ ದಾಳಿ ನಡೆದಿದೆ. ಬ್ಯಾಗಿನಲ್ಲಿ ಬಾಂಬ್ ಸಾಗಿಸಿದ ಆತ್ಮಾಹುತಿ ಬಾಂಬ್ ದಾಳಿ ಇದು ಎನ್ನಲಾಗಿದೆ. ವಿಪತ್ತು ಪರಿಹಾರ, ಚಿಕಿತ್ಸೆ ಭರದಿಂದ ಸಾಗಿದೆ.