ನಿನ್ನೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಹಾಗೂ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಖಾತೆ ಪಡೆದ 52ರ ಪ್ರತಿಮಾ ಭೌಮಿಕ್ ತ್ರಿಪುರಾದಿಂದ ಮಂತ್ರಿ ಆದ ಮೊದಲಿಗರು ಎಂಬ ದಾಖಲೆ ಬರೆದರು.
ಇಂದಿರಾ ಗಾಂಧಿ ಸಂಪುಟದಲ್ಲಿ ಮಂತ್ರಿ ಆಗಿದ್ದ ತ್ರಿಗುಣ ಸೇನ್ ತ್ರಿಪುರದಿಂದ ರಾಜ್ಯಸಭೆಗೆ ಆಯ್ಕೆ ಆಗಿದ್ದರು. ಆದರೆ ಅವರು ಪಡುವಣ ಬಂಗಾಳದವರು. ಹಾಗೆಯೇ ರಾಜೀವ್ ಗಾಂಧಿ ಸಂಪುಟದಲ್ಲಿ ಮಂತ್ರಿ ಆಗಿದ್ದ ಸಂತೋಷ ಮೋಹನದೇವ್ ಅವರು ತ್ರಿಪುರದಿಂದ ಲೋಕಸಭೆಗೆ ಆಯ್ಕೆಯಾದವರು. ಆದರೆ ಅವರು ಅಸ್ಸಾಂ ಮೂಲದವರು.
ಪ್ರತಿಮಾರು ತ್ರಿಪುರದ ಬಾರನಾರಾಯಣ ಗ್ರಾಮದವರು. ಕೃಷಿಕರು. ವಿಜ್ಞಾನ ಪದವೀಧರೆ ಆದ ಇವರು 1991ರಲ್ಲಿ ಬಿಜೆಪಿ ಸೇರಿದರು. 1998 ಮತ್ತು 2018ರಲ್ಲಿ ತ್ರಿಪುರ ಮುಖ್ಯಮಂತ್ರಿ ಆಗಿದ್ದ ಮಾಣೆಕ್ ಸರ್ಕಾರ್ ವಿರುದ್ಧ ಸ್ಪರ್ಧಿಸಿ ಸೋತಿದ್ದರು. 2019ರಲ್ಲಿ ಲೋಕಸಭೆಗೆ ಆಯ್ಕೆಯಾದರು.