ದೇಶದ ಪ್ರಮುಖ ನಗರಗಳಲ್ಲಿ ಎನ್‌ಓ2- ನೈಟ್ರೋಜನ್ ಡೈ ಆಕ್ಸೈಡ್ ಪ್ರಮಾಣ ಅಧಿಕವಾಗುತ್ತಲೇ ಇದೆ. ದೆಹಲಿ, ಚೆನ್ನೈ, ಬೆಂಗಳೂರುಗಳಲ್ಲಿ ಅತ್ಯಧಿಕವಾಗಿದೆ ಎಂದು ಗ್ರೀನ್ ಪೀಸ್ ಇಂಡಿಯಾ ವರದಿಯಲ್ಲಿ ಹೇಳಿದೆ.

ವಾಹನಗಳು, ಕೈಗಾರಿಕೆಗಳು ಮತ್ತು ಕಲ್ಲಿದ್ದಲು ಆಧಾರಿತ ಮಿಂಚುರಿ ಘಟಕಗಳಿಂದ ಎನ್‌ಓ2 ಅಧಿಕವಾಗುತ್ತದೆ. ಭಾರತದ ನಗರಗಳಲ್ಲಿ ವಾಯು ಮಾಲಿನ್ಯದ ಜೊತೆಗೆ ಎನ್‌ಓ2 ಏರಿಕೆಯೂ ಅಧಿಕವಾಗಿದೆ. ಇದರಿಂದ ಉಸಿರಾಟದ ತೊಂದರೆ ಮೊದಲಾದವು ಅಧಿಕರಿಸುತ್ತವೆ.

2020- 21ರ ನಡುವೆ ಗಣನೀಯ ಏರಿಕೆ ಆಗಿರುವುದು ವರದಿಯಿಂದ ತಿಳಿದು ಬರುತ್ತದೆ. ದೆಹಲಿಯಲ್ಲಿ 125%, ಚೆನ್ನೈನಲ್ಲಿ 94%, ಬೆಂಗಳೂರಿನಲ್ಲಿ 90%, ಹೈದರಾಬಾದ್‌‌ನಲ್ಲಿ 69% ಮುಂಬಯಿಯಲ್ಲಿ 52%, ಜೈಪುರದಲ್ಲಿ 47%, ಲಕ್ನೋದಲ್ಲಿ 32%, ಕೊಲ್ಕತ್ತಾದಲ್ಲಿ 11% ನೈಟ್ರೋಜನ್ ಡೈ ಆಕ್ಸೈಡ್ ಹೆಚ್ಚಳ ಕಂಡಿದೆ.