ಟೋಕಿಯೋ ಪ್ಯಾರಾಲಿಂಪಿಕ್ಸ್ 2020 ಹೆಸರಿನಲ್ಲಿಯೇ ನಡೆಯುತ್ತಿದ್ದು, 83 ದೇಶಗಳು ಈಗಾಗಲೇ ಪದಕ ಪಟ್ಟಿಯಲ್ಲಿ ತಮ್ಮ ಹೆಸರು ಬೆಳಗಿಸಿವೆ.

77 ಚಿನ್ನದೊಂದಿಗೆ 168 ಪದಕ ಪಡೆದ ಚೀನಾ, 36 ಬಂಗಾರದ ಸಹಿತ 100 ಪದಕ ಪಡೆದ ಬ್ರಿಟನ್, 32 ಸ್ವರ್ಣದೊಡನೆ 99 ಪದಕ ಹಿಡಿದ ರಶಿಯಾ, 28 ಕನಕ ಸಹಿತ 81 ಪದಕ ಒಗ್ಗೂಡಿಸಿರುವ ಯುಎಸ್‌ಎ, 20 ಬಂಗಾರ ಸೇರಿ  86 ಪದಕ ಗಳಿಸಿರುವ ಉಕ್ರೇನ್‌ಗಳು ಮೆಡಲ್ ಟೇಬಲಿನ ಮೊದಲ ಐದು ಸ್ಥಾನಗಳಲ್ಲಿ ಇವೆ.

ಬ್ರೆಜಿಲ್, ನೆದರ್ಲ್ಯಾಂಡ್ಸ್, ಆಸ್ಟ್ರೇಲಿಯಾ, ಇಟೆಲಿ, ಅಜರ್‌ಬೈಜಾನ್  ಮುಂದಿನ 10ರವರೆಗಿನ ಸ್ಥಾನಗಳನ್ನು ಕ್ರಮವಾಗಿ ತುಂಬಿವೆ.

ಭಾರತವು 2 ಚಿನ್ನ, 5 ಬೆಳ್ಳಿ, 3 ಕಂಚು ಸಹಿತ 10 ಪದಕದೊಂದಿಗೆ ಪದಕ ಪಟ್ಟಿಯ 36ನೇ ಸ್ಥಾನದಲ್ಲಿದೆ.