ಹೊಸ ಆಡಳಿತದಲ್ಲಿ ಅಫಘಾನಿಸ್ತಾನ ಸರಕಾರವು‌ ಚೀನಾವನ್ನು ಪ್ರಮುಖ ಸಹಭಾಗಿಯಾಗಿ ಸ್ವೀಕರಿಸಿದೆ ಎಂದು ತಾಲಿಬಾನ್ ಆಡಳಿತ ವಕ್ತಾರ ಜಬೀವುಲ್ಲಾ ಮುಜಾಹಿದ್ ತಿಳಿಸಿದರು.

ಅಫಘಾನಿಸ್ತಾನವನ್ನು ಮರು ಕಟ್ಟುವಲ್ಲಿ, ರೈಲು, ರಸ್ತೆ, ಕೈಗಾರಿಕೆ ವಿಸ್ತರಿಸುವಲ್ಲಿ ಚೀನಾದ ನೆರವು ಸಿಗಲಿದೆ. ಆ ಮೂಲಕ ಆಫ್ರಿಕಾ, ಯೂರೋಪ್ ಜೊತೆಗೆ ವ್ಯಾಪಾರ ವ್ಯವಹಾರ ಸಂಪರ್ಕ ಕುದುರಿಸಲಾಗುವುದು ಎಂದು ಅವರು ಹೇಳಿದರು.

ಅಫಘಾನಿಸ್ತಾನದಲ್ಲಿ ಅಪಾರ ತಾಮ್ರದ ನಿಕ್ಷೇಪಗಳು ಇದ್ದು, ಅದರ ಆಳದ ಗಣಿಗಾರಿಕೆ ಮತ್ತು ಅದರ ವಿಶ್ವ ವ್ಯಾಪಿ ವ್ಯಾಪಾರ ಕುದುರಿಸಲು ಚೀನಾದ ನೆರವು ದೇಶದ ಆರ್ಥಿಕತೆ ಮರುಕಟ್ಟುವ ಮಾರುಕಟ್ಟೆ ವಿಸ್ತರಣೆ ಕುದುರಿಸಲಿದೆ ಎಂದು ಸಹ ಜಬೀ ಉಲ್ಲಾ ಮುಜಾಹಿದ್ ಹೇಳಿದರು.

ಈ ನಡುವೆ ಯುಎಇ ವಿಮಾನದ ಮೂಲಕ ತುರ್ತು ಆಹಾರ ಮತ್ತು ವೈದ್ಯಕೀಯ ನೆರವು ರವಾನಿಸಿದೆ.